Latest

ಕರಾವಳಿ ಸಂಪೂರ್ಣ ದೇಶದ್ರೋಹಿಗಳ ಆಡಂಬರವಾಗುತ್ತಿದೆ -ಸಂಸದ ಅನಂತಕುಮಾರ್ ಹೆಗಡೆ

ಇಲ್ಲಿ ಅಭಿವೃದ್ದಿಮಾಡಿಯೇ ನಾನು ವಿಶ್ರಮಿಸುತ್ತೇನೆ

ಪ್ರಗತಿವಾಹಿನಿ ಸುದ್ದಿ, ಶಿರಸಿ –  ಇಲ್ಲಿನ ಅಭಿವೃದ್ಧಿಯ ಲಾಭವನ್ನು ದೇಶದ್ರೋಹಿಗಳು ಪಡೆದುಕೊಳ್ಳುತ್ತಾರೆ, ಮಂಗಳೂರು ಸಂಪೂರ್ಣ ನಮ್ಮ ಕೈ ತಪ್ಪಿ ಹೋಗುತ್ತಿದೆ , ಕರಾವಳಿ ಸಂಪೂರ್ಣ ದೇಶದ್ರೋಹಿಗಳ ಆಡಂಬರವಾಗುತ್ತಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ನೀಡಿದ ಅನಂತಕುಮಾರ್ ಹೆಗಡೆ, ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿಗೆ ತಲೆನೋವಾಗಿದ್ದು ಮಂಗಳೂರಿನ ಮೂಲ ನಿವಾಸಿಗಳಲ್ಲ, ಕೇರಳದವರು. ನಮ್ಮ ಊರಿನ ಅಭಿವೃದ್ಧಿ ಲಾಭವನ್ನು ನಾವೇ ಪಡೆದುಕೊಳ್ಳಬೇಕು, ಮಂಗಳೂರಿನ ಅಭಿವೃದ್ಧಿ ಲಾಭವನ್ನು ಕೇರಳದವರು ಪಡೆದುಕೊಳ್ಳುತ್ತಿದ್ದಾರೆ. ನಾವು ಬೇರೆಡೆ ಹೋಗಿ ಅಲ್ಪ ಸಂಬಳಕ್ಕೆ ಚಾಕರಿ ಮಾಡುತಿದ್ದೇವೆ ಎಂದರು.
ಇಷ್ಟು ದಿನ ಅಭಿವೃದ್ಧಿ ಬಗ್ಗೆ ಹೇಳುತಿದ್ದೆವು. ಆದರೇ ಆ ದಿಕ್ಕಿನೆಡೆ ದಾಪುಗಾಲು ಹಾಕಿರಲ್ಲಿಲ್ಲ , ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯಡೆ ದಾಪುಗಾಲು ಹಾಕುತಿದ್ದೇವೆ. ಜಿಲ್ಲೆಯಲ್ಲಿ ಮಂಗಳೂರಿಗಿಂತ ಅತೀ ದೊಡ್ಡ ಪೋರ್ಟ ಅನ್ನು ನಿರ್ಮಾಣ ಮಾಡುತಿದ್ದೇವೆ. ಏರ್ ಪೋರ್ಟ ಬರಲಿದೆ. ಇಲ್ಲಿ ಅಭಿವೃದ್ದಿಮಾಡಿಯೇ ನಾನು ವಿಶ್ರಮಿಸುತ್ತೇನೆ  ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button