
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು: ದೇಶಾದ್ಯಂತ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಿತ್ತೂರಿನಲ್ಲಿ ಬೇಕಾಬಿಟ್ಟಿ ರಸ್ತೆಯಲ್ಲಿ ಅಡ್ಡಾಡುವವರಿಗೆ ಪೋಲಿಸರು ಲಾಠಿ ರುಚಿ ಮತ್ತು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.
ಸುಖಾಸುಮ್ಮನೆ ಹೊರಗಡೆ ಅಲೆದಾಡುವ ಯುವಕರಿಗೆ ಬಸ್ಕಿ ಹೊಡಿಸಿದ ಪೋಲಿಸರು, ಲಾಠಿ ಪ್ರಯೋಗವನ್ನೂ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದ ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಘಟನೆ ನಡೆದಿದೆ. ಲಾಕ್ ಡೌನ್ ಇದ್ದರೂ ಹೊರಗಡೆ ಬೈಕ್ ತೆಗೆದುಕೊಂಡು ಅಲೆದಾಟ ನಡೆಸುತ್ತಿದ್ದರು ಈ ಯುವಕರು.
ಯುವಕರಿಗೆ ಸರಿಯಾಗಿ ಬೆಂಡೆತ್ತಿ 100 ಬಸ್ಕಿ ಹೊಡಿಸಿದ್ದಾರೆ ಪೋಲಿಸರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ