Kannada NewsLife StyleTech

*ದೇಶದ ಅತ್ಯಂತ ಸ್ಲಿಮ್ ಮೊಬೈಲ್ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೇಶದಲ್ಲೇ ಅತ್ಯಂತ ಸ್ಲಿಮ್‌ ಆಗಿರುವ ಹಾಗೂ ಅತ್ಯಾಧುನಿಕ ಫೀಚರ್ ಗಳೊಂದಿಗೆ ಅತಿ   ಕ್ಷಮತೆಯ ಬ್ಯಾಟರಿ‌ ಹೊಂದಿರುವ ಮೊಬೈಲ್ ನ್ನು  ಮಂಗಳವಾರ ಖ್ಯಾತ ಚಿತ್ರನಟಿ ಹರಿಪ್ರಿಯಾ ಬಿಡುಗಡೆಗೊಳಿಸಿದರು.

ಬೆಂಗಳೂರಿನ ಬ್ಯಾಂಕ್ ಕಾಲೊನಿಯ‌ ಸಂಗೀತಾ ಗ್ಯಾಜೆಟ್ಸ್ ಮಳಿಗೆಯಲ್ಲಿ ವಿವೊ ವಿ50 ಬಿಡುಗಡೆಗೊಂಡಿದ್ದು ಅತ್ಯಾಕರ್ಷಕ ಮೂರು ಬಣ್ಣಗಳಲ್ಲಿ ಲಭ್ಯವಿವೆ.

ಹೊಸ ಅವತರಣಿಕೆಯ ವಿವೊ ವಿ50  ಬಿಡುಗಡೆಗೊಳಿಸಿ ಮಾತನಾಡಿದ ಅವರು ಎಲ್ಲರೂ ಸ್ಲಿಮ್ ಆಗಿರಲು ಬಯಸುವಂತೆ ಮೊಬೈಲ್ ಕೂಡಾ ಸ್ಲಿಮ್ ಆಗಿದ್ದು ನೋಡಲೂ ಸುಂದರವಾಗಿದೆ. ಈ ಮೊಬೈಲ್ ಗ್ರಾಹಕರ ನೆಚ್ಚಿನ ಮೊಬೈಲ್ ಆಗಿ ಹೊರಹೊಮ್ಮಲಿದೆ ಎಂದರು.

ವಿವೊ ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ಚಂದ್ರು ಮಾತನಾಡಿ ಮೊಬೈಲ್ ಬಿಟ್ಟಿರಲಾರದ ಈ ದಿನಗಳಲ್ಲಿ ವಿವೊ ವಿ50 ಗ್ರಾಹಕರ ಸೆಳೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ದಿನದ 24 ಗಂಟೆಗಳ ಸಂಗಾತಿಯಾಗಲಿದೆ ಎಂದರು.

Home add -Advt

ಸಂಗೀತಾ ಗ್ಯಾಜೆಟ್ಸ್ ನ ಮಾರಾಟ ವಿಭಾಗದ ಮುಖ್ಯಸ್ಥ ಭರತ್ ಪ್ರಭಾತ್ ಮಾತನಾಡಿ ಸಂಗೀತಾ ಗ್ರಾಹಕರಿಗೆ ನೀಡುತ್ತಿರುವ ವಿಶೇಷ ಸೌಲಭ್ಯಗಳ ಕುರಿತು ವಿವರಿಸಿದರು. ಮೊಬೈಲ್ ಕೆಳಗೆ ಬಿದ್ದು ಒಡೆದು ಹೋದರೆ ,ಕಳ್ಳತನವಾದರೆ ಏನನ್ನೂ ಪ್ರಶ್ನಿಸದೇ ಹೊಸ ಮೊಬೈಲ್ ನೀಡಲಾಗುವುದು. ಬೆಲೆ ಕುಸಿತವಾದರೆ ಪರಿಹಾರ ಮೊತ್ತವನ್ನೂ ನೀಡಲಾಗುವುದು ಎಂದರು. ವಿವೊ ಮಾರಾಟ ವಿಭಾಗದ ಕರ್ನಾಟಕ ಮತ್ತು ಗೋವಾ ಮುಖ್ಯಸ್ಥ ಸಾಗರ್ ಹಾಜರಿದ್ದರು.

Related Articles

Back to top button