Kannada NewsKarnataka News

ಸಂಶಯಾಸ್ಪದ ರೀತಿಯಲ್ಲಿ ದಂಪತಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ:  ದಂಪತಿಗಳು ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿದ ಘಟನೆ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಯಲಕ್ಷ್ಮೀ ಲಕ್ಷ್ಮಣ ದ್ಯಾಮನ್ನವರ (೨೫) ವಿವಾಹಿತ ಯುವತಿ ಬುಧವಾರ ಮಧ್ಯಾನ್ಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ೬ ಗಂಟೆ ಸುಮಾರಿಗೆ ಮೃತ ಪಟ್ಟಿದ್ದಾಳೆ. ಮೃತ ಯುವತಿಯ ತಂದೆ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾನೆ.
ಪತಿ ಲಕ್ಷ್ಮಣ ಹಣಮಂತ ದ್ಯಾಮನ್ನವರ (೨೮) ಈತನು ಬುಧವಾರ  ತಾಲೂಕಿನ ಕೊಳವಿ ಗ್ರಾಮದ ಹತ್ತಿರವಿರುವ ಘಟಪ್ರಭಾ ಬಲದಂಡೆ ಕಾಲುವೆಗೆ ಕಾರು ಸಮೇತ ಹಾರಿದ್ದು ಗುರುವಾರ  ಸಂಜೆ ಪೋಲೀಸರು ಪತ್ತೆ ಹಚ್ಚಿದ್ದಾರೆ.
ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರದಿಂದ ಕಾರು ಮತ್ತು ಶವವನ್ನು ಹೊರತಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ಲಕ್ಷ್ಮಣ ಪತ್ನಿಯ ಸಾವಿನ ಸುದ್ದಿ ತಿಳಿದ ತಕ್ಷಣ ಕಾಲುವೆಗೆ ಬಿದ್ದಿದ್ದಾನೆ ಅಥವಾ ಬೇರೆ ಕಾರಣ ಏನಿದೆ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ದಂಪತಿ ಈ ಸಾವು ನಿಗೂಢವಾಗಿದೆ.
ಈ ಎರಡು ಪ್ರಕರಣಗಳು ಗೋಕಾಕ ನಗರ ಮತ್ತು ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button