ವಿವಿಧ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಉದ್ಯಮಬಾಗ ಮತ್ತು ಮಾರ್ಕೆಟ್ ಪೊಲೀಸ್ ಠಾಣೆಗಳ ಎರಡು ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
23/09/2017 ರಂದು ಬೆಳಗಾವಿ ನಗರದ ಉದ್ಯಮಬಾಗ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 103/2017 ಕಲಂ 380, 457 ಐಪಿಸಿ ಪ್ರಕಾರ ತನಿಖೆ ಕೈಗೊಂಡಿದ್ದ ಪಿಎಸ್ಐ ಎಸ್.ಆರ್.ಕುಲಗೋಡ, (ನಿವೃತ್ತ) ಆರೋಪಿತನ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದು, 4ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಆರೋಪಿಯಾದ ಅಬ್ದುಲಗಣಿ ಶಣ್ಣೀರ ಶೇಖ(25) ದೋಷಿಯೆಂದು ಪರಿಗಣಿಸಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಿ 01/04/2024 ರಂದು ಆದೇಶ ಹೊರಡಿಸಲಾಗಿದೆ.
ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 22/01/2018 ರಂದು ದಾಖಲಾದ ಪ್ರಕರಣದಲ್ಲಿ 143, 148. 341, 323, 307, 504, 506 149 24 ತನಿಖೆಯನ್ನು ಎಎಸ್ಐ ಅಶೋಕ ಎಂ ಯರಗಟ್ಟಿ, ಎಎಸ್‌ಐ (ನಿವೃತ್ತ) ರವರು ಕೈಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿ ಸಿಸಿ ನಂ.161/2020 ರಡಿ 10ನೇ ಡಿಜೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿಗಳಿಗರ ಶಿಕ್ಷೆ ವಿಧಿಸಲಾಗಿದೆ.
ಶುಭಂ ಬಾಳು ಹದಗಲ್(20), ಸಾಗರ ಬಾಳು ಪ್ರಧಾನ(24), ಮಹೇಶ ಗುಂಡು ಪಾಟೀಲ(19), ಯುವರಾಜ ದಿಲೀಪ ಪವಾರ(23), ಮಾರುತಿ ಪ್ರಕಾಶ ಪಾಟೀಲ(26), ವಿಕ್ರಮ ಪಾಂಡುರಂಗ ಮುತಗೇಕರ(28) ಹಾಗೂ ಈರಣ್ಣಾ ಸಿದ್ದಲಿಂಗ ಬಾಗೇವಾಡಿ(21) ಇವರಿಗೆ ಶಿಕ್ಷೆ ವಿಧಿಸಿದೆ. 6 ಆರೋಪಿಗಳಿಗೆ ತಲಾ ರೂ.7000 ದಂಡ ಹಾಗೂ ಆರೋಪಿ 7 ಇವನಿಗೆ ನಾಲ್ಕು ವರ್ಷ ಸಾದಾ ಶಿಕ್ಷೆ ಹಾಗೂ ರೂ 75,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ