Kannada NewsKarnataka News

ಮಗನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ತಂದೆ

ಪ್ರಗತಿವಾಹಿನಿ ಸುದ್ದಿ: ತಂದೆ ಮತ್ತು ಮಗನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.‌ ತಂದೆ ಡೋಂಗ್ರೆಪ್ಪ ಮಗನಾದ ಕರಿಯಪ್ಪ ಬೀಳಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆಯು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ಜರುಗಿದೆ.

ಕೊಲೆಮಾಡಿದ ಡೋಂಗ್ರೆಪ್ಪ ಬಳಿಕ ಬೀಳಗಿ ಪೊಲೀಸರಿಗೆ ಶರಣಾಗಿದ್ದಾನೆ. ಮೇ 13ರಂದು ಮನೆಯಲ್ಲಿ ಮಗ ಊಟಕ್ಕೆ ಕುಳಿತ ಸಂದರ್ಭದಲ್ಲಿ ಇಬ್ಬರೂ ಮದ್ಯದ ಅಮಲಿನಲ್ಲಿದ್ದ ವೇಳೆ ತಂದೆ ಮತ್ತು ಮಗನ ನಡುವೆ ಗಲಾಟೆಯಾಗಿದೆ. ಈ ವೇಳೆ ಮಗ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

Home add -Advt

ಹಲ್ಲೆಗೆ ಒಳಗಾದ ತಂದೆ ಡೋಂಗ್ರಪ್ಪ ಮನೆಯಿಂದ ಆಚೆ ಹೋಗಿ ಕೆಲ ಗಂಟೆಗಳ ಬಳಿಕ ಕೊಡಲಿ ಸಮೇತ ಆಗಮಿಸಿ, ಮನೆಯ ಹೊರಗಡೆ ಮಲಗಿದ್ದ ಮಗನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಜೋರಾದ ಶಬ್ದ ಬಂದ ಹಿನ್ನೆಲೆಯಲ್ಲಿ ಮನೆಯ ಒಳಗಡೆ ಮಲಗಿದ್ದ ಮೃತ ಯುವಕನ ತಾಯಿ ಹೊರಬಂದು ನೋಡಿದಾಗ ಮಗನ ಕೊಲೆಯಾಗಿದ್ದು ಗೊತ್ತಾಗಿದೆ. ಕೂಡಲೇ ಸ್ಥಳೀಯರ ಸಹಕಾರದಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

Related Articles

Back to top button