GIT add 2024-1
Kore@40
Beereshwara 33

ಮಹಾ ಸಿಎಂಗೆ ತಾಕತ್ತಿದ್ದರೆ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಮೊದಲು ಮಹಾರಾಷ್ಟ್ರದಲ್ಲಿ ಅವರ ಸರ್ಕಾರ ಉಳಿಯಲಿ, ಅಲ್ಲಿ ಏನೂ ಕಡೆದು ಕಟ್ಟೆ ಹಾಕಿಲ್ಲ. ಇನ್ನು ಕರ್ನಾಟಕಕ್ಕೆ ಬಂದು ಏನು ಮಾಡೋದಿದೆ? ಅವರು ಗಂಡಸ್ಸಾಗಿದ್ದರೆ ನಮ್ಮ ರಾಜ್ಯಕ್ಕೆ ಬಂದು ನಾಲ್ಕು ಶಾಸಕರನ್ನು ಕರೆದುಕೊಂಡು ಹೋಗಲಿ  ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆಗೆ ಸಚಿವ ಶರಣಬಸಪ್ಪ ದರ್ಶನಾಪುರ ಸವಾಲು ಹಾಕಿದ್ದಾರೆ.

Emergency Service

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಅವರದ್ದೇ ಶಾಸಕರ ಕಾಲಿಗೆ ಬೀಳುವ ಸ್ಥಿತಿ ಇದೆ, ಶಿಂಧೆ ಪರಿಸ್ಥಿತಿ ಅಲ್ಲಿ ನಾಯಿ ಪಾಡು. ಮೊದಲು ಅದನ್ನು ಸರಿ ಮಾಡಿಕೊಳ್ಳಲಿ, ಅವರ ಸೀಟು ಉಳಿಸಿಕೊಳ್ಳಲಿ. ಒಂದು ಕಡೆ ಬಿಜೆಪಿ ಪಕ್ಷ, ಮತ್ತೊಂದೆಡೆ ಸ್ವತಃ ಅವರ ಶಾಸಕರೆ  ಗುಮ್ಮುತ್ತಿದ್ದಾರೆ. ಮೊದಲು ತಮ್ಮ ಸೀಟು ಉಳಿಸಿಕೊಳ್ಳಲಿ. ತಾಕತ್ತಿದ್ದರೆ ರಾಜ್ಯಕ್ಕೆ ಬರಲಿ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಸವಾಲು ಹಾಕಿದ್ದಾರೆ.

Laxmi Tai add
Bottom Add3
Bottom Ad 2