GIT add 2024-1
Kore@40
Beereshwara 33

ಬೈಕ್ ಅಪಘಾತದಲ್ಲಿ ಓರ್ವ ಯುವಕ ಸಾವು

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎರಡು ಬೈಕ್ ಗಳ ಮಧ್ಯೆ ಅಪಘಾತ ನಡೆದು ಓರ್ವ ಯುವಕ ಸಾವನ್ನಪ್ಪಿದರೆ ಮತ್ತೋರ್ವನಿಗೆ ಗಂಭಿರ ಗಾಯವಾಗಿರುವ ಘಟನೆ ನಡೆದಿದೆ.‌

Emergency Service

ಅಥಣಿ ತಾಲೂಕಿನ ಗುಂಡೇವಾಡಿ ಪಾರ್ಥನಹಳ್ಳಿ ಮಧ್ಯದ ಜತ್ತ- ಜಾಂಬೋಟಿ ಮುಖ್ಯ ಹೆದ್ದಾರಿಯಲ್ಲಿ ಎಚ್. ಪಿ. ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ನಡೆದಿದೆ. ಮೃತ ಯುವಕನನ್ನು ಅಥಣಿ ತಾಲೂಕಿನ ಬಳ್ಳಿಗೇರಿಯ ಮಲ್ಲಯ್ಯ ಮಠಪತಿ (21) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕ್‌ ಸವಾರ ಮಹಾರಾಷ್ಟ್ರದ ವಜ್ರವಾಡಿ ಗ್ರಾಮದ ಯುವಕನಾಗಿದ್ದು, ಆತನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Laxmi Tai add
Bottom Add3
Bottom Ad 2