Belagavi NewsBelgaum NewsKannada NewsKarnataka News

*ಹದಿನೆಂಟು ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ಸಾಂಬ್ರಾ ಮಹಾಲಕ್ಷ್ಮಿ ಜಾತ್ರೆ*

ಪ್ರಗತಿವಾಹಿನಿ ಸುದ್ದಿ : ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಶೃದ್ಧಾ, ಭಕ್ತಿಯಿಂದ ಚಾಲನೆ ನೀಡಲಾಯಿತು.

Home add -Advt

 ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಸಂಜೆ ಶೃದ್ಧಾ, ಭಕ್ತಿಯಿಂದ ಚಾಲನೆ ನೀಡಲಾಯಿತು. 18 ವರ್ಷಕ್ಕೊಮ್ಮೆ ನಡೆಯುವ  ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದಲ್ಲಿ ಲಕ್ಷ್ಮೀ ದೇವಿಯ ಹೊನ್ನಾಟ ಸುಮಾರು ಎರಡುವರೆ ಗಂಟೆಗಳ ಕಾಲ ವಿಜೃಂಭಣೆಯಿಂದ ನಡೆಯಿತು. ಬೆಳಗಾವಿ ನಗರ ಸೇರಿ ವಿವಿಧ ಗ್ರಾಮಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು .

ಮಹಾಲಕ್ಷ್ಮಿದೇವಿಗೆ ಉಡಿ ತುಂಬುವದು ಹಾಗೂ ನೈವೇದ್ಯ ಸಮರ್ಪಿಸಿ ಭಕ್ತಿ ಸೇವೆ ಸಲ್ಲಿಸಿದರು , ಭಕ್ತಾದಿಗಳು ಭಂಡಾರ ಹಾರಿಸುತ್ತ, ದೇವಿಯ ವಿಗ್ರಹ ಹೊತ್ತು ಭಕ್ತಿ ಭಾವದಲ್ಲಿ ಮಿಂದೆದ್ದರು.

Related Articles

Back to top button