ಪ್ರಗತಿವಾಹಿನಿ ಸುದ್ದಿ: ರೌಡಿಶೀಟರಗೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವಾಗ ಸಿಪಿಐ ಕೈ ಮೇಲೆ ಚಾಕು ಇರಿದಿದ್ದು, ತಮ್ಮ ಆತ್ಮ ತಕ್ಷಣೆಗಾಗಿ ಸಿಪಿಐ ರೌಡಿಶೀಟರ್ ಕಾಲಿಗೆ ಫೈಯರಿಂಗ್ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.
ಬೀದರ್ ನಗರದಲ್ಲಿ ರಾತ್ರೋರಾತ್ರಿ ಗುಂಡಿನ ಸದ್ದು ಕೇಳಿದ. ಈ ವೇಳೆ ಅಕ್ಕಪಕ್ಕ ಇದ್ದ ಜನ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಚಿಕಿತ್ಸೆಗೆಂದು ನ್ಯೂಟೌನ್ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ರೌಡಿಶೀಟರ್ ರಸೂಲ್ ನನ್ನು ಕರೆದೊಯ್ಯುವಾಗ ಪೊಲೀಸರ ಜೊತೆ ಕಿರಿಕ್ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯ ಸಿಪಿಐ ಸಂತೋಷಗೆ ಚಾಕು ಇರಿದಿದ್ದಾನೆ. ಈ ವೇಳೆ ಸಿಪಿಐ ಸಂತೋಷ ತಮ್ಮ ಆತ್ಮರಕ್ಷಣೆಗಾಗಿ ರೌಡಿಶೀಟರ್ ಮೇಲೆ ಪೈರ್ ಮಾಡಿದ್ದಾರೆ.
ಬೀದರ್‌ನ ಹೃದಯ ಭಾಗದಲ್ಲಿರುವ ಸಾಯಿ ಸ್ಕೂಲ್ ಆವರಣದ ಬಳಿ ಪೈರಿಂಗ್ ನಡೆದಿದೆ. ರೌಡಿಶೀಟರ್ ಮೊದಲು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಲಾಗಿದೆ. ಆದರೆ ರೌಡಿಶೀಟರ್ ಚಾಕು ತೆಗೆದು ಸಿಪಿಐ ಕೈಗೆ ಇರಿದಿದ್ದಾನೆ. ಹಾಗಾಗಿ ಆತ್ಮರಕ್ಷಣೆಗಾಗಿ ರಸೂಲ್ ಬಲಗಾಲಿಗೆ ಫೈರ್ ಮಾಡಲಾಗಿದೆ.
ಗಾಯಗೊಂಡ ಸಿಪಿಐ ಸಂತೋಷಗೆ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಈ ವೇಳೆ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತು ಎಸ್‌ಪಿ ಚನ್ನಬಸವಣ್ಣ ಮಾಹಿತಿ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸಿಪಿಐ ಸಂತೋಷ ಅವರನ್ನು ಕಲಬುರಗಿಯ ಖಾಸಗಿ ಅಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ರವಾನೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ