Latest

*ಸಿಲಿಂಡರ್ ಮತ್ತಷ್ಟು ದುಬಾರಿ*

ಪ್ರಗತಿವಾಹಿನಿ ಸುದ್ದಿ: ನವರಾತ್ರಿಗೂ ಮುನ್ನ ಅಕ್ಟೋಬರ್ ತಿಂಗಳ ಮೊದಲ ದಿನದಂದು ದೇಶದ ಜನರಿಗೆ ಸಿಲಿಂಡ‌ರ್ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗೃಹಬಳಕೆ ಮತ್ತು ವಾಣಿಜ್ಯ LPG ಸಿಲಿಂಡರ್ ದರ ಬಿಡುಗಡೆಯಾಗಿದೆ.

ನಗರದಿಂದ ನಗರಕ್ಕೆ ಬೆಲೆ ವ್ಯತ್ಯಾಸವಿದ್ದು, ವಾಣಿಜ್ಯ ಎಲ್‌ಪಿಸಿ ಸಿಲಿಂಡರ್ ಬೆಲೆ ಇದೀಗ ಮತ್ತಷ್ಟು ದುಬಾರಿಯಾಗಿದೆ. ಈ ಮೂಲಕ ಹೋಟೆಲ್ ಉದ್ಯಮಗಳಿಗೆ ಮತ್ತಷ್ಟು ಬಿಸಿ ತಟ್ಟಲಿದೆ.ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡ‌ರ್ ಬೆಲೆ ಮತ್ತೊಮ್ಮೆ ಏರಿಕೆ ಮಾಡಿವೆ. 19 ಕೆಜಿ ಎಲ್‌ಪಿಜಿ ಸಿಲಿಂಡ‌ರ್ ಬೆಲೆ 48.50 ರೂಪಾಯಿ ಹೆಚ್ಚಾಗಿದ್ದು, ದೆಹಲಿಯಲ್ಲಿ 1740 ರೂಪಾಯಿಗೆ ಏರಿಕೆಗೊಂಡಿದೆ. ಆದರೆ ಗೃಹಬಳಕೆ ಸಿಲಿಂಡರ್ ಬೆಲೆ 14.2ಕೆಜಿ ಸಿಲಿಂಡ‌ರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನ ದರವನ್ನೇ ಅಕ್ಟೋಬರ್ ತಿಂಗಳ ಆರಂಭದಲ್ಲಿ ಮುಂದುವರಿಸಲಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು 48.50 ರೂಪಾಯಿ ಬೆಲೆ ಏರಿಕೆ ಕಂಡುಬಂದಿದ್ದು 1,818 ರೂಪಾಯಿಗೆ ತಲುಪಿದೆ. ಬೆಲೆ ಪರಿಷ್ಕರಣೆಗೂ ಮುನ್ನ ಬೆಲೆಯು 19 KG ಪ್ರತಿ ಸಿಲಿಂಡರ್‌ಗೆ 1,769.50 ರೂಪಾಯಿಗಳಷ್ಟಿತ್ತು.

Home add -Advt

Related Articles

Back to top button