Latest

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವುದರಿಂದ ಆಗಬಹುದಾದ ಅಪಾಯಗಳು

ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿಗೆ ಬೊಂದೂರಿನ ಬಿಜೆಪಿ ಉಪಾಧ್ಯಕ್ಷ ವಿನೋದ್‌ಕುಮಾರ್ ಗುಜ್ಜಾಡಿ ಬರೆದ ಪತ್ರ ಇಲ್ಲಿದೆ

ಗೆ,
ಎ.ಜಿ. ಪ್ರಭುಲಿಂಗ ನಾವದಗಿ
ನ್ಯಾಯವಾದಿ,
ಬೆಂಗಳೂರು.
ವಿಷಯ – ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವುದರಿಂದ ಆಗಬಹುದಾದ ಅಪಾಯಗಳು

ಆಧುನಿಕ ತಂತ್ರಜ್ಞಾನದ ದಿನಂಪ್ರತಿ ಹೊಸ ಆವಿಷ್ಕಾರದಿಂದ ವಿಸ್ತಾರಗೊಳ್ಳುತ್ತಿರುವ ತಾಂತ್ರಿಕ ಜಗತ್ತಿನಲ್ಲಿ ಅನುಕೂಲಗಳ ಜೊತೆಗೆ ಹೊಸ ಹೊಸ ಸಮಸ್ಯೆಗಳು ಹಾಗೂ ಸವಾಲುಗಳು ಎದುರಾಗುತ್ತಿವೆ.
ವಿಶೇಷವಾಗಿ ಭಾರತದಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನದಿಂದಾಗಿ ತಯಾರಿಸಲ್ಪಟ್ಟ ಹಲವು ಅಧಿಕ ಸಾಮರ್ಥ್ಯವುಳ್ಳ ಚಿಕ್ಕಚಿಕ್ಕ ಸಾಧನೋಪಕರಣಗಳಿಂದ ಅದೆಷ್ಟು ಅನುಕೂಲವಾಗುತ್ತಿದೆಯೋ ಅಷ್ಟೇ ಅಪಾಯಕಾರಿ ಪರಿಣಾಮಗಳನ್ನು ಎದುರಿಸುತ್ತಾ ಬಂದಿದ್ದೇವೆ.
ಪ್ರಸ್ತುತ ಕರ್ನಾಟಕದಲ್ಲಿ ಶೈಕ್ಷಣಿಕ ಸ್ಥಳಗಳಲ್ಲಿ ಹಿಜಾಬ್ ಧಾರಣೆ ಸಂಬಂಧದಲ್ಲಿ ಇದನ್ನು ವಿಶ್ಲೇಷಿಸುತ್ತಾ ಹೋದಲ್ಲಿ ಈ ಕೆಳಕಂಡ ಸಂಗತಿಗಳು ಅದರಿಂದಾಗುವ ದುಷ್ಪರಿಣಾಮಗಳು ಶಿಕ್ಷಣ ಕ್ಷೇತ್ರದಲ್ಲಿ ತಲ್ಲಣ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಅಂತಹ ಸಂಗತಿಗಳು ಏನೆಂದರೆ :-

೧. ಆಧುನಿಕ ತಂತ್ರಜ್ಞಾನ ಬಳಸಿ ಹಿಜಾಬ್ ಧರಿಸಿ ಪರೀಕ್ಷಾ ಅಕ್ರಮ ನಡೆಸುವ ಸಾಧ್ಯತೆ ಅಧಿಕ.
ಉದಾಹರಣೆ :- ಬ್ಲೂಟೂತ್ / ವೈರ್‌ಲೆಸ್ ಮೈಕ್ರೊ ಹೆಡ್‌ಫೋನ್, ( Ear bud) ಹಿಜಾಬ್ ಧಾರಣೆ ಮಾಡಿದವರು ಈ ಸಾಧನವನ್ನು ಕಿವಿಯಲ್ಲಿರಿಸಿಕೊಂಡು , ಪಿಸುಮಾತಿನಲ್ಲಿ ಪ್ರಶ್ನೆ ಕಳಿಸಿ, ವಿವರವಾದ ಉತ್ತರಪಡೆದು ಪರೀಕ್ಷೆಗಳಲ್ಲಿ ಬರೆಯಲು ಅವಕಾಶವಿರುತ್ತದೆ.

೨. ತರಗತಿಗಳು ನಡೆಯುವ ವೇಳೆ ಹಿಜಾಬ್ ಧರಿಸಿ ಮೋಜು-ಮಸ್ತಿ ಮಾಡಲು ಅವಕಾಶ ನೀಡಿದಂತಾಗುತ್ತದೆ. Face book, Whats app, Instagram ಗಳಲ್ಲಿ ಡೆಸ್ಕ್ ಡ್ರಾಯರ್‌ನಲ್ಲಿ ಮೊಬೈಲ್ ಇರಿಸಿ ಕಿವಿಗೆ ಇಯರ್‌ಫೋನ್ ಇರಿಸಿಕೊಂಡು ಚಾಟ್ ಮಾಡಿದರೂ ಯಾರಿಗೂ ತಿಳಿಯುವುದಿಲ್ಲ. ಆದರೆ ಶೈಕ್ಷಣಿಕ ವಾತಾವರಣದಿಂದ ಈ ವಿದ್ಯಾರ್ಥಿಗಳು ಕಾಲಕ್ರಮೇಣ ಹೊರಗುಳಿದಂತಾಗುತ್ತದೆ.
ಹೀಗೆ ಹಿಜಾಬ್ ಧರಿಸಿ ಆಧುನಿಕ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವುದು ಶೈಕ್ಷಣಿಕ ಅಸಮಾನತೆಗೆ , ಅಶಿಸ್ತಿನ ವಾತಾವರಣ ನಿರ್ಮಾಣಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ.
ಸಮವಸ್ತ್ರ ಧರಿಸುವುದು ಬಡವ-ಬಲ್ಲಿದ, ಮೇಲು-ಕೀಳು ಇತ್ಯಾದಿ ಭಾವಗಳಿಗೆ ಅವಕಾಶ ನೀಡದೆ ಸಮಾನತೆಯ ಸಂಕೇತವಾಗಿದೆ.

ಹಿಜಾಬ್: ಪರೀಕ್ಷಾ ಅಕ್ರಮಗಳಿಗೆ ಅವಕಾಶ, ತರಗತಿಗಳು ನಡೆಯುವ ಸಂದರ್ಭ, ಪರೀಕ್ಷೆ ನಡೆಯುವ ಸಂದರ್ಭಗಳಲ್ಲಿ ಯಾವುದೇ ವಿದ್ಯಾರ್ಥಿನಿ ಹಿಜಾಬ್ ತಲೆಮೇಲಿನಿಂದ ಧರಿಸಿದ್ದೇ ಆದಲ್ಲಿ ಕಿವಿಗೆ ಮೈಕ್ರೋ ವೈರ್ ಲೆಸ್ ಹೆಡ್ ಫೋನನ್ನು ಒಳಭಾಗದಲ್ಲಿ ಅಳವಡಿಸಿಕೊಂಡು ರಾಜಾರೋಷವಾಗಿ ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚು.
ಹಿಜಾಬ್ / ಬುರ್ಕಾ, ಇಂದಿನ ಟೆಕ್ನಾಲಜಿಯಲ್ಲಿ QR Code ಅನ್ನು cloud ID ಐಡಿಯಿಂದ ಕ್ಯಾಮರಾದ ಆಡಿಯೋ ವೀಡಿಯೋ ವನ್ನು ಪ್ರಪಂಚದ ಯಾವುದೇ ಮೂಲೆಯಿಂದಲೂ ನೋಡಲು ಕುಳಿತು ನೋಡಲು ಅವಕಾಶ ಇರುವ ಇಂದಿನ ಈ ಆಧುನಿಕ ಯುಗದಲ್ಲಿ ನಾವು ಯೋಚಿಸಿಬೇಕಾದದ್ದು ಮುಂದಿನ ೧೦ ಮತ್ತು ೨೦ ವರ್ಷಗಳಲ್ಲಿ ಆಗುವ ತಂತ್ರಜ್ಞಾನ ಬದಲಾವಣೆಗಳ ಬಗ್ಗೆ ಗಮನಿಸಬೇಕಾಗುತ್ತದೆ.
ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಮಖ್ಯವಾಗಿ ಕಿವಿ/ಬಾಯಿ/ಕಣ್ಣು ಕೈಗಳು ಬೋಧಕರಿಗೆ ಕಾಣಿಸಲೇಬೇಕು. ಇದನ್ನು ಮರೆಮಾಚಿ ಈ ಅನಾಹುತಕ್ಕೆ ಸಾಧ್ಯವಾದ್ದರಿಂದ ಹಿಜಾಬ್ ಅನ್ನು ವಿದ್ಯಾರ್ಥಿಗಳು ತರಗತಿಗೆ ಧರಿಸಿಕೊಂಡು ಬರುವುದು ಅಪಾಯಕಾರಿ ಅನ್ನುವದೇ ನನ್ನ ಅಭಿಪ್ರಾಯ.

ವಿನೋದ್‌ಕುಮಾರ್ ಗುಜ್ಜಾಡಿ
ಉಪಾಧ್ಯಕ್ಷರು, ಭಾರತೀಯ ಜನತಾ ಪಾರ್ಟಿ
ವಿಧಾನಸಭಾ ಕ್ಷೇತ್ರ
ಬೈಂದೂರು.
ಮೊಬೈಲ್ ನಂಬರ್ : ೯೯೦೦೧೧೩೨೪೬

ಶಾಸಕ ಜಮೀರ್ ಅಹ್ಮದ್ ವಿರುದ್ಧ FIR ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button