Kannada NewsKarnataka News

ಮಗು ಸಾವಿಗೆ ಜಿಲ್ಲಾಧಿಕಾರಿ ವಿಷಾದ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :ಗೋಕಾಕ ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಜರುಗಿದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾಕರಣದಲ್ಲಿ ದಿನಾಂಕ 10-01-2020 ರಂದು ಕುಮಾರ ಸಾಯಿಸಮರ್ಥ ಪ್ರಕಾಶ ಮಾಯನ್ನವರ, ವಯಸ್ಸು: 2 ತಿಂಗಳು 4 ದಿವಸ, ಗ್ರಾಮ: ಹುಣಶ್ಯಾಳ, ತಾ: ಗೋಕಾಕ ಈತನಿಗೆ ಪೆಂಟಾವೆಲೆಂಟ್ 1st Dose ಲಸಿಕೆ ನೀಡಲಾಗಿತ್ತು.
ಗ್ರಾಮದಲ್ಲಿ ದಿನಾಂಕ:11-01-2020 ರಂದು ಬೆಳಿಗ್ಗೆ 11:30 ಕ್ಕೆ ಮಗು ಅನುಮಾನಾಸ್ಪದವಾಗಿ ಮರಣ ಹೊಂದಿರುತ್ತದೆ. ಈ ಬಗ್ಗೆ ಜಿಲ್ಲಾಡಳಿತದ ಪರವಾಗಿ ವಿಷಾದವ್ಯಕ್ತಪಡಿಸುತ್ತೇನೆ ಎಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ತಿಳಿಸಿದ್ದಾರೆ.
ರಾಷ್ಟ್ರೀಯ ಸಾರ್ವತ್ರಿಕ ಲಸಿಕಾಕರಣ ಕಾರ್ಯಕ್ರಮದಲ್ಲಿ ಲಸಿಕೆ ನೀಡುವ ಮೂಲಕ ನಮ್ಮ ಮಕ್ಕಳಿಗೆ 9 ಮಾರಕ ರೋಗಗಳಾದ ಡಿಫ್ತೀರಿಯಾ, Measles (ಗೋಲ್ಡರ), ನಾಯಿಕೆಮ್ಮು, ಪೋಲಿಯೋ, ಬಾಲಕಯ, ಕಾಮಾಲೆರೋಗ, ಗಂಟಲುಮಾರಿ, ಧನುರ್ವಾಯು ಹಾಗೂ ಇನ್‌ಫೂಯೆಂಜಾ ಮುಂತಾದ ರೋಗಗಳು ಬಾರದಂತೆ ಹಿಡಿತ ಸಾಧಿಸುತ್ತಿದ್ದೇವೆ.
 ರಾಷ್ಟ್ರೀಯ ಸಾರ್ವತ್ರಿಕ ಲಸಿಕಾಕರಣ ಕಾರ್ಯಕ್ರಮದಿಂದ ರಾಷ್ಟ್ರದಲ್ಲಿ ಇಂದು ನಮ್ಮ ಮಕ್ಕಳಲ್ಲಿ ಪೋಲಿಯೋ ರೋಗ ಹಾಗೂ Smallpox ನಿರ್ಮೂಲನೆ ಮಾಡಲು ಯಶಸ್ಸು ಸಾಧಿಸಿರುತ್ತೇವೆ.
ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಉದ್ದೇಶವು ನಮ್ಮೆಲ್ಲ ಮಕ್ಕಳು ಆರೋಗ್ಯದಿಂದ ಹಾಗೂ ಸದೃಡವಾಗಿ ಬೆಳೆಯಬೇಕೆಂಬುದಾಗಿದೆ.
ಆದ್ದರಿಂದ ಯಾರೂ ಆತಂಕಕ್ಕೊಳಗಾಗದೆ ತಮ್ಮ ಮಕ್ಕಳಿಗೆ ಎಲ್ಲ ಲಸಿಕೆಗಳನ್ನು ನಿಯಮಿತವಾಗಿ
ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button