ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಅಪರಿಚಿತ ಯುವಕನ ಶವವೊಂದು ಮಲಪ್ರಭಾ ಕಾಲುವೆ ದಂಡೆ ಬಂದು ನಿಂತಿದೆ.
ಶವವಾದ ಯುವಕ ಯಾರು ಎನ್ನುವ ಕುರಿತು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿಗೆ ಪ್ರಯತ್ನಿಸುತ್ತಿದ್ದಾರೆ.
ಪೊಲೀಸರು ಈ ಸಂಬಂಧ ಪ್ರಕಟಣೆಯೊಂದನ್ನು ನೀಡಿದ್ದಾರೆ. ಅದು ಹೀಗಿದೆ;
“ಹೆಸರು ವಿಳಾಸ ತಿಳಿಯದ ಸುಮಾರು 28-30 ವಯಸ್ಸಿನ ಅನಾಮಧೇಯ ಗಂಡಸಿನ ಶವ ಮಲಪ್ರಭಾ ಬಲದಂಡೆಯ ಕಾಲುವೆಯಲ್ಲಿ ಹಂಚಿನಾಳ ಗ್ರಾಮ ಹದ್ದಿಯಲ್ಲಿ ಬಂದು ನಿಂತಿದ್ದು ಸಂಬಂಧಿಕರು ಪತ್ತೆ ಆದಲ್ಲಿ ಸೌದತ್ತಿ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದೆ”
ಈ ಮಧ್ಯೆ ಗೋಕಾಕದಲ್ಲಿ ಅಪಹರಣಕ್ಕೊಳಗಾಗಿ ಕೊಲೆಯಾದ ಉದ್ಯಮಿಯ ಶವ ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸರು ಇನ್ನೂ ಶೋಧ ನಡೆಸುತ್ತಿದ್ದಾರೆ.
*ದೇಶ ರಕ್ಷಿಸುವಲ್ಲಿ ಸೈನಿಕರ ಕಾರ್ಯ ಮುಖ್ಯ; ಲೇಖಕ ಪ್ರವೀಣ ಗಿರಿ*
https://pragati.taskdun.com/kitturuarmy-training-centrepravin-giri/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ