Belagavi NewsBelgaum NewsKarnataka NewsPolitics

*ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಸಂಸದ ಜಗದೀಶ ಶೆಟ್ಟರ್ ಕಿಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 15 ವರ್ಷದ ಬಾಲಕಿಯ ಮೇಲೆ ಒಂದು ಅತ್ಯಾಚಾರ ನಡೆದಿದ್ದು, ಯುವಕನೊಬ್ಬ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ, ನಂತರ ಆಕೆ ಮೇಲೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಮಾಡಿ, ಅದನ್ನು ವಿಡಿಯೋ ಚಿತ್ರೀಕರಣ ಮಾಡಿಟ್ಟುಕೊಂಡು ಅದನ್ನು ತೋರಿಸಿ ಹೆದರಿಸಿ ಮತ್ತೆ ಅತ್ಯಾಚಾರ ಮಾಡಿರುವ ಘಟನೆ ನಮ್ಮ ಬೆಳಗಾವಿಯಲ್ಲಿ ಜರಗಿದೆ. ಇದು ಅತ್ಯಂತ ವಿಷಾದಕರ ಸಂಗತಿ ಎಂದು ಸಂಸದರಾದ ಜಗದೀಶ್ ಶೆಟ್ಟರ್ ಅವರು ಬೆಸರ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಪುಂಡರಿಗೆ ಪೊಲೀಸರ ಮತ್ತು ಕಾನೂನಿನ ಬಗ್ಗೆ ಭಯವೇ ಇಲ್ಲದಂತಾಗಿದೆ, ಸಮಾಜದ ಸ್ವಸ್ಥ ಕಲಕುವ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ, ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. 

ಮಹಿಳೆಯರ ಸಬಲೀಕರಣಕ್ಕೆ ಸರ್ಕಾರಿ ಬಸ್ ನಲ್ಲಿ ಉಚಿತ ಪಯಣ ಪ್ರತಿ ತಿಂಗಳು ಗೃಹಲಕ್ಷ್ಮಿಯ ಹಣ ಹಾಕಿದರೆ ಸಾಲದು, ಮನೆಯ ಮಹಾಲಕ್ಷ್ಮಿಯರಾದ ಹೆಣ್ಣು ಮಕ್ಕಳನ್ನು ಇಂತಹ ಕಾಮುಕರಿಂದ ರಕ್ಷಿಸುವುದು ಅತ್ಯಂತ ಮಹತ್ವದ ಸಂಗತಿ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಭದ್ರತೆ ಒದಗಿಸುವುದು ಅತ್ಯಂತ ಅವಶ್ಯಕ. 

ಗ್ಯಾರೆಂಟಿಗಳಿಂದಚೆಗೆ ರಾಜ್ಯದಲ್ಲಿ ಮೇಲಿಂದ ಮೇಲೆ ಆಗುತ್ತಿರುವ ಸಮಾಜಘಾತಕ ಕೃತ್ಯಗಳ ಕುರಿತು ನಿಗಾ ವಹಿಸಿ, ಅಪರಾಧಿಗಳಿಗೆ ಸರಿಯಾದ ಶಿಕ್ಷೆ ವಿಧಿಸಿ, ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.

Home add -Advt

ಇನ್ನಾದರೂ ಎಚ್ಚೆತ್ತುಕೊಂಡು ಸಿಎಂ ಅವರು ಮಹಿಳೆಯರ ರಕ್ಷಣೆಗೆ ಪ್ರಾಮುಖ್ಯತೆ ನೀಡಿ, ಅಪರಾಧಿಗಳಿಗೆ ಸರಿಯಾದ ಶಿಕ್ಷೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button