Latest

ಸರಕಾರಿ ನೌಕರರ ಮೊದಲ ಆದ್ಯತೆ ವೇತನ ಆಯೋಗ ರಚನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವೇತನ ಆಯೋಗದ ರಚನೆ ಸರಕಾರಿ ನೌಕರರ ಸಂಘದ ಪ್ರಥಮ ಆದ್ಯತೆಯಾಗಿದ್ದು ಆ ನಂತರದಲ್ಲಿ ಪಿಂಚಣಿ ನೀತಿ (NPS) ವಿರುದ್ಧ ನಿರ್ಣಾಯಕ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, NPS ವಿರುದ್ಧದ ಹೋರಾಟದ ನಿರ್ಣಯಕ್ಕೆ ಸಂಬಂಧಿಸಿದಂತೆ ಕೆಲವರು ತಮ್ಮನ್ನು ಸರಕಾರಿ ಏಜೆಂಟ್ ಎಂದು ಆರೋಪಿಸಿದ್ದು ಈ ಮಾತುಗಳಿಂದ ತಾವು ವಿಚಲಿತರಾಗುವ ಪ್ರಶ್ನೆಯೇ ಇಲ್ಲ ಎಂದರು.

ವೇತನ ಆಯೋಗದ ರಚನೆ ಹೋರಾಟದ ನಂತರ ಏಪ್ರಿಲ್ ವೇಳೆಗೆ NPS ವಿರುದ್ಧದ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.

ವೇತನ ಆಯೋಗದ ರಚನೆ ಹಾಗೂ NPS ರದ್ದುಗೊಳಿಸುವ ವಿಚಾರಗಳನ್ನು ಸರಕಾರದ ಮುಂದೆ ಇರಿಸಲಾಗಿತ್ತು. ಆದರೆ, ಸರಕಾರದ ಮೇಲೆ 40 ಸಾವಿರ ಕೋಟಿಯಷ್ಟು ಹೊರೆ ಬೀಳುವುದರಿಂದ ಏಕಕಾಲಕ್ಕೆ ಎರಡೂ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎನ್ನಲಾಗಿತ್ತು. ಇದರಿಂದಾಗಿ ವೇತನ ಆಯೋಗ ರಚನೆಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.

NPS ಸಮಸ್ಯೆ 16 ವರ್ಷಗಳಿಂದಲೂ ಇದೆ. NPS ನೌಕರರೂ ನಮ್ಮವರೇ ಆಗಿದ್ದಾರೆ. ಈ ಹಿಂದೆ ಷೇರು ಮಾರುಕಟ್ಟೆ ಉತ್ತಮವಾಗಿದ್ದು ಈಗ ಪರಿಸ್ಥಿತಿ ಭಿನ್ನವಾಗಿದೆ. ಇದು ತಮ್ಮ ಗಮನಕ್ಕೂ ಬಂದಿದ್ದು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಹಲವು ಬಾರಿ ಚರ್ಚಿಸಲಾಗಿದೆ. ದೇಶದ ಮೂರು ರಾಜ್ಯಗಳಲ್ಲಿ NPS ರದ್ದುಪಡಿಸಲು ಆದೇಶವಾಗಿದೆ. ಆದರೆ OPS ಜಾರಿಗೊಂಡಿಲ್ಲ. ಕೇಂದ್ರ ಸರಕಾರ NPS ಪದ್ಧತಿಯನ್ನು ತಿರಸ್ಕರಿಸಿದೆ ಎಂದು ಷಡಾಕ್ಷರಿ ತಿಳಿಸಿದರು.

ರಾಜ್ಯ ಸರಕಾರಿ ನೌಕರರಿಗೆ OPS ಜಾರಿಗೆ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ: ಸಿದ್ದರಾಮಯ್ಯ

https://pragati.taskdun.com/discussion-with-high-command-to-implement-ops-for-state-government-employees-siddaramaiah/

*ವದಂತಿಗಳಿಗೆ ತೆರೆ; ಸ್ಪಷ್ಟ ಸಂದೇಶ ರವಾನಿಸಿದ ಮಾಜಿ ಸಚಿವ ಜನಾರ್ಧನ ರೆಡ್ಡಿ ಕ್ಷೇತ್ರ ಘೋಷಣೆ*

https://pragati.taskdun.com/janardhana-reddypressmeetbangalore/

*ಕಡಲ ನಗರಿಯಲ್ಲಿ ಮತ್ತೊಂದು ಬರ್ಬರ ಹತ್ಯೆ; ನಿಷೇಧಾಜ್ಞೆ ಜಾರಿ*

https://pragati.taskdun.com/mangalorekatipalli-murder-casejaleel-murdersuratkalbajpe144-section/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button