Latest

ಸರ್ವಸಮ್ಮತ ತೀರ್ಪು ನೀಡಿದ ಐವರು ನ್ಯಾಯಾಧೀಶರು

ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಶತಮಾನದ ಅಯೋಧ್ಯಾ ವಿವಾದಕ್ಕೆ ಸರ್ವೋಚ್ಛ ನ್ಯಾಯಾಲಯದ ಐವರು ನ್ಯಾಯಾಧೀಶರು ಸರ್ವಸಮ್ಮತ ತೀರ್ಪು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿಅಯೋಧ್ಯಾ ತೀರ್ಪು ಪ್ರಕಟ: ವಿವಾದಿತ ಭೂಮಿ ರಾಮಲಲ್ಲಾ ಪಾಲು

ವಿವಾದಿತ 2.7 ಎಕರೆ ಜಮೀನು ರಾಮಲಲ್ಲಾಗೆ ಸೇರಿದ್ದು. ಅಲ್ಲಿ ರಾಮಮಂದಿರ ನಿರ್ಮಾಣವಾಗಲಿ. ಸರಕಾರವೇ ಮಂದಿರ ನಿರ್ಮಾಣ ಮಾಡಬೇಕು. ಸುನ್ನಿ ಬೋರ್ಡ್ ಗೆ ಪ್ರತ್ಯೇಕವಾಗಿ, ಬೇರೆ ಸ್ಥಳದಲ್ಲಿ 5 ಎಕರೆ ಭೂಮಿ ನೀಡಬೇಕು ಎಂದು ಕೋರ್ಟ್ ಹೇಳಿದೆ. ಇದರಿಂದಾಗಿ ವಿವಾದ ಅಂತ್ಯವಾದಂತಾಗಿದೆ.

ಶ್ರೀ ರಾಮ ಜನ್ಮ ಭೂಮಿಯಲ್ಲೇ ಮಂದಿರ ನಿರ್ಮಾಣವಾಗಬೇಕು. ರಾಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸಬೇಕು. 3 ತಿಂಗಳಲ್ಲಿ ಒಂದು ಸಮೀತಿ ರಚಿಸಿ, ಪ್ರಕ್ರಿಯೆ ಆರಂಭಿಸಿ. ಮಂದಿರ ನಿರ್ಮಾಣದ ಹೊಣೆಯನ್ನು ಸರಕಾರ ನಿರ್ವಹಿಸಬೇಕು. ಸುನ್ನಿಬೋರ್ಡ್ ಗೆ 5 ಎಕರೆ ಬೇರೆ ಸ್ಥಳ ನೀಡಬೇಕು. ಅಲ್ಲಿ ಮಂದಿರ ನಿರ್ಮಾಣ ಮಾಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

Home add -Advt

ಇದೇ ವೇಳೆ ಸುನ್ನಿ ಬೋರ್ಡ್ ಪರ ವಕೀಲರು ತೀರ್ಪು ಮರು ಪರಿಶೀಲನೆಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಅಯೋಧ್ಯೆ ಪ್ರಕರಣದ ಸಂಪೂರ್ಣ ಇತಿಹಾಸ ಇಲ್ಲಿದೆ

 

Related Articles

Back to top button