Latest

ಸಾರಿಗೆ ಮುಷ್ಕರವನ್ನು ನಿಷೇಧಿಸಿದ ಸರ್ಕಾರ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಾರಿಗೆ ಸೇವೆಯನ್ನು ಸಾರ್ವಜನಿಕ ಸೇವೆ ಉಪಯುಕ್ತ ಸೇವೆ ಎಂದು ಪರಿಗಣಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರವನ್ನು ತಕ್ಷಣದಿಂದ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ.
ಅಲ್ಲದೆ ವಿವಾದವನ್ನು ನ್ಯಾಯಾಧಿಕರಣಕ್ಕೆ ಕಳುಹಿಸಿದೆ.
ಮುಷ್ಕರವನ್ನು ನಿಷೇಧಿಸಿ ನಾಲ್ಕೂ ನಿಗಮಗಳಿಗೆ ಸೂಚನೆ ನೀಳಿಸಲಾಗಿದೆ. ತಕ್ಷಣಕ್ಕೆ ಜಾರಿಬರುವಂತೆ ನಿಷೇಧ  ಹೇರಲಾಗಿದೆ. ಸಂದಾನ ಕಾರ್ಯ ಚಾಲ್ತಿಯಲ್ಲಿರೋವಾಗ ಮುಷ್ಕರ ಮಾಡುವಂತಿಲ್ಲ. ಕೈಗಾರಿಕಾ ವಿವಾಧ ಕಾಯ್ದೆ 1947 ರ 10 ಡಿ ಕಲಂ ಅಡಿ ಮುಷ್ಕರ ನಿಷೇಧ ಮಾಡಲಾಗಿದ್ದು,  ವಿವಾದವನ್ನು ನ್ಯಾಯಾಧಿಕರಣಕ್ಕೆ ಕಳುಹಿಸಿಕೊಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button