ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಿಕ್ಷಕರು, ಲೈನ್ ಮನ್ ಗಳು ಹಾಗೂ ಗ್ಯಾಸ್ ಸಿಲೆಂಡರ್ ವಿತರಕರನ್ನು ಸರಕಾರ ಫ್ರಂಟಲೈನ್ ವಾರಿಯರ್ಸ್ ಎಂದು ಘೋಷಿಸಿದೆ.
ಇದರಿಂದಾಗಿ ಕೊರೋನಾ ಸಂಬಂಧಿತ ಎಲ್ಲ ಸೌಲಭ್ಯ ಪಡೆಯಲು ಇವರು ಅರ್ಹರಾಗುತ್ತಾರೆ. ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಪತ್ರಕರ್ತರು ಮೊದಲಾದವರನ್ನು ಫ್ರಂಟಲೈನ್ ವಾರಿಯರ್ಸ್ ಎಂದು ಈಗಾಗಲೆ ಘೋಷಿಸಲಾಗಿದೆ.
ಈಗ ಶಿಕ್ಷಕರು, ಕೆಪಿಟಿಸಿಎಲ್ ಲೈನ್ ಮನ್ ಗಳು ಹಾಗೂ ಗ್ಯಾಸ್ ಸಿಲೆಂಡರ್ ವಿತರಕರನ್ನೂ ಫ್ರಂಟಲೈನ್ ವಾರಿಯರ್ಸ್ ಎಂದು ಘೋಷಿಸಲಾಗಿದೆ.
ಫ್ರಂಟಲೈನ್ ವಾರಿಯರ್ಸ್ ಯಾವುದೇ ವಯಸ್ಸಿನ ಬೇಧವಿಲ್ಲದೆ ವ್ಯಾಕ್ಸಿನ್ ಪಡೆಯಲು ಅರ್ಹರಾಗುತ್ತಾರೆ. ಒಂದು ವೇಳೆ ಇವರು ಮೃತಪಟ್ಟಲ್ಲಿ ಕುಟುಂಬ ವರ್ಗ 30 ಲಕ್ಷ ರೂ. ಪಡೆಯಲು ಅರ್ಹವಾಗುತ್ತದೆ. ಕೊರೋನಾ ಚಿಕಿತ್ಸೆಯಲ್ಲೂ ಇವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಕೋವಿಡ್ 2ನೇ ಅಲೆಯ ಸಪೋರ್ಟ್ ಪ್ಯಾಕೇಜ್ (ಸಮಗ್ರ ಮಾಹಿತಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ