ಗುರುವಾರ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಘೋಷಣೆ: ಸಿಎಂ ಬೊಮ್ಮಾಯಿ ಭರವಸೆ – ಯತ್ನಾಳ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಂಚಮಸಾಲಿ ಹೋರಾಟಕ್ಕೆ ಸರಕಾರ ಮಣಿದಿದ್ದು, ಗುರುವಾರ 2ಎ ಮೀಸಲಾತಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಹೋರಾಟ ಸಮಿತಿ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಈ ವಿಷಯ ತಿಳಿಸಿದರು. ತಾಯಿ ಮೇಲೆ ಆಣೆ ಮಾಡಿ, ಆಯೋಗದ ವರದಿಯನ್ನು ಸರಕಾರ ಒಪ್ಪಿಕೊಂಡಿದ್ದೇವೆ. ಬುಧವಾರ ಸರ್ವ ಪಕ್ಷ ಸಭೆ ಕರೆದು ಗುರುವಾರ 2ಎ ಘೋಷಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ದೇವರ ಸಾಕ್ಷಿಯಾಗಿ ಹೇಳಿದ್ದಾರೆ ಎಂದು ಯತ್ನಾಳ ಹೇಳಿದರು.
ಪಂಚಮಸಾಲಿಗಳಿಗೆ ಒಬ್ಬರೇ ಸ್ವಾಮಿಗಳು ಅವರು ಕೂಡಲ ಸಂಗಮದ ಸ್ವಾಮಿಗಳು ಎಂದು ಯತ್ನಾಳ ಹೇಳಿದರು. ಜನಶಕ್ತಿಯ ಮುಂದೆ ಯಾರೇ ಇದ್ದರೂ ಬಗ್ಗಬೇಕಾಗುತ್ತದೆ ಎಂದರು.
ಕೊಡ್ತೀರೋ ಇಲ್ವೋ? ಕೊಡದಿದ್ರೆ ಈಗ್ಲೇ ಹೇಳಿ ಬಿಡಿ ಎಂದು ಹೇಳಿದೆವು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ವರದಿ ಕೊಟ್ಟಿದ್ದಾರೆ. ಅವರು ಪಂಚಮಸಾಲಿಗಳಿಗೆ ಮೀಸಲಾತಿ ಕೊಡುವುದು ಸೂಕ್ತ ಎಂದು ಹೇಳಿದ್ದಾರೆ. ನಂತರ ಸುದೀರ್ಘ ಚರ್ಚೆ ಮಾಡಿದ್ದೇವೆ. ತಾಯಿ ಮೇಲೆ ಆಣೆ ಮಾಡಿ, ಆಯೋಗದ ವರದಿಯನ್ನು ಸರಕಾರ ಒಪ್ಪಿಕೊಂಡಿದ್ದೇವೆ. ಬುಧವಾರ ಸರ್ವ ಪಕ್ಷ ಸಭೆ ಕರೆದು ಗುರುವಾರ 2ಎ ಘೋಷಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ದೇವರ ಸಾಕ್ಷಿಯಾಗಿ ಹೇಳಿದ್ದಾರೆ ಎಂದು ಯತ್ನಾಳ ಹೇಳಿದರು.
ಮಾಡಲಿಲ್ಲ ಎಂದರೆ ಅವರನ್ನು ದಂಡೆಗೆ ಹಚ್ಚುವವರೆಗೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಐತಿಹಾಸಿಕ ನಿರ್ಣಕ್ಕೆ ಕಾರಣರಾದ ವಿಜಯಾನಂದ ಕಾಶಪ್ಪನವರೇ, ಈ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರೇ, ಈ ಹೋರಾಟದಿಂದ ಜಿಲ್ಲಾಮಟ್ಟದ ನಾಯಕರಾಗಿ ಪರಿವರ್ತಿತರಾಗಿರುವ ಈರಣ್ಣ ಕಡಾಡಿಯವರೇ, ಮುಂದಿನ ಶಾಸಕರಾಗಲಿರುವ ವಿಶ್ವನಾಥ ಪಾಟೀಲ ಅವರೇ ಎಂದು ಬಸನಗೌಡ ಪಾಟೀಲ ಯತ್ನಾಳ ಮಾತು ಆರಂಭಿಸಿದರು.
ಇದಕ್ಕೂ ಮೊದಲು ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಹಲವರು ಮಾತನಾಡಿದರು.
ನಿಮಗೆ ಮೀಸಲಾತಿ ಸಿಕ್ಕಿದೆ – ವಿಜಯಾನಂದ ಕಾಶಪ್ಪನವರ್
https://pragati.taskdun.com/you-got-reservation-vijayananda-kashappanavar/
*ಮತ್ತೊಂದು ನರಗುಂದ ಬಂಡಾಯವಾಗಲು ಅವಕಾಶ ಕೊಡಬೇಡಿ; ಬಸವಜಯ ಮೃತ್ಯುಂಜಯ ಸ್ವಾಮೀಜಿ*
https://pragati.taskdun.com/panchamasali-2a-reservationsamaveshabasavajaya-mrityunjaya-swamiji/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ