ಪ್ರಗತಿವಾಹಿನಿ ಸುದ್ದಿ, ಸಿಂದಗಿ: ಬಿಇಒ, ಮಾಜಿ ಮುಖ್ಯೋಪಾಧ್ಯಾಯ ಮತ್ತಿತರರು ಸೇರಿ ತಮಗೆ ಕಿರುಕುಳ ನೀಡಿದ್ದಾಗಿ ಆರೋಪಿಸಿ ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು ಶಾಲಾ ಮುಖ್ಯಾಧ್ಯಾಪಕರೊಬ್ಬರು ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಸಾಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಮಲ್ಲಪ್ಪ ನಾಯಕಲ್ (54) ನೇಣಿಗೆ ಶರಣಾದವರು.
ಸಿಆರ್ ಸಿ ಆಗಿ ಬಡ್ತಿ ಹೊಂದಿರುವ ಶಾಲೆಯ ಹಿಂದಿನ ಮುಖ್ಯೋಪಾಧ್ಯಾಯ ಜಿ.ಎನ್.ಪಾಟೀಲ, ಬಿಇಒ ಎಚ್.ಎಂ. ಹರನಾಳ, ಜಿ.ಎನ್. ಪಾಟೀಲ, ಸಾಸಾಬಾಳ ಗ್ರಾಮದ ಸಂಗಮೇಶ ಚಿಂಚೊಳ್ಳಿ, ಎಸ್.ಎಲ್. ಭಜಂತ್ರಿ, ಬಿ.ಎಂ. ತಳವಾರ ತಮಗೆ ಕಿರುಕುಳ ನೀಡಿದ್ದಾಗಿ ಅವರು ಡೆತ್ ನೋಟ್ ನಲ್ಲಿ ದೂರಿದ್ದಾರೆ.
ಜಿ.ಎನ್. ಪಾಟೀಲ ಹಾಗೂ ಭಜಂತ್ರಿ ಅವರು ತಮಗೆ ಪ್ರಭಾರ ಮುಖ್ಯೋಪಾಧ್ಯಾಯ ಹುದ್ದೆ ಬಿಟ್ಟುಕೊಡುವಾಗ ದಾಖಲೆಗಳನ್ನು ಸಮರ್ಪಕವಾಗಿ ಬರೆಯದೆ ಸತಾಯಿಸಿದ್ದಾರೆ. ಹರನಾಳ ಅವರಿಗೆ ಈ ಬಗ್ಗೆ ತಿಳಿದಿದ್ದರೂ ಅವರು ನೋಟಿಸ್ ನೀಡುವ ಮೂಲಕ ಹಿಂಸಿಸಿದ್ದಾರೆ. ಬಿ.ಎಂ. ತಳವಾರ ಸಾರ್ವಜನಿಕವಾಗಿ ತಮಗೆ ಅವಹೇಳನ ಮಾಡುತ್ತಿದ್ದು ಸಂಗಮೇಶ ಚಿಂಚೊಳ್ಳಿ ಕೂಡ ಮೂದಲಿಸಿ ತಮ್ಮಿಂದ ಹಣ ಕಿತ್ತುಕೊಂಡಿದ್ದು ತಾವು ಆತ್ಮಹತ್ಯೆ ನಿರ್ಧಾರ ತಳೆಯಲು ಕಾರಣವಾಗಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಬಸವರಾಜ ಅವರ ಪತ್ನಿ ಮಹಾದೇವಿ ಅವರೂ ಪೊಲೀಸ್ ಠಾಣೆಯಲ್ಲಿ ಇದೇ ವಿಷಯಗಳನ್ನು ಉಲ್ಲೇಖಿಸಿ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
*ಬೆಳಗಾವಿ: ಪಬ್ ನಿಂದ ಜಿಗಿದು ಯುವಕ ದುರ್ಮರಣ*
https://pragati.taskdun.com/youngdeathjumpbuildingbelagavi/
ಸಿಎಸ್ ಸಿ ಮೂಲಕ ಆಧಾರ್ ಸೇವೆ ಸರಳ: ಗಜಾನನ ನಾಯ್ಕ
https://pragati.taskdun.com/aadhaar-service-through-csc-made-simple-gajanana-naik/
ಜೆಜೆಎಂ ಯೋಜನೆಯಡಿ ನಿಪ್ಪಾಣಿ ಕ್ಷೇತ್ರಕ್ಕೆ ರೂ.98.40 ಕೊಟಿ – ಸಂಸದ ಅಣ್ಣಾಸಾಹೇಬ ಜೊಲ್ಲೆ
https://pragati.taskdun.com/rs-98-40-crore-for-nippani-constituency-under-jjm-scheme-mp-annasaheb-jolle/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ