Latest

 ಗೋವಾದ ಕೆಂಪು ಮೆಣಸಿಗೆ ಐತಿಹಾಸಿಕ ಬೆಲೆ

ಪ್ರಗತಿವಾಹಿನಿ ಸುದ್ದಿ, ಪಣಜಿ: ಗೋವಾದ ಕೆಂಪು ಮೆಣಸು ತಿಂದರೆ ಮಾತ್ರವಲ್ಲ ಸದ್ಯ ಕೆಂಪು ಮೆಣಸು ಕಂಡಕೂಡಲೇ ಕಣ್ಣಲ್ಲಿ ನೀರು ಬರುವಂತಾಗಿದೆ.

ಹೌದು ಗೋವಾದ ಕೆಂಪು ಮೆಣಸು ಪ್ರತಿ ಕೆ.ಜಿಗೆ ೧೦೦೦ ರೂ ತಲುಪಿದೆ. ಇದರಿಂದಾಗಿ ಗೋವಾದಲ್ಲಿ ಸದ್ಯ ಕೆಂಪು ಮೆಣಸು ಕಂಡಕೂಡಲೇ ಕಣ್ಣಲ್ಲಿ ನೀರು ಬರುವಂತಾಗಿದೆ. ಇತಿಹಾದಲ್ಲಿಯೇ ಪ್ರಪ್ರಥಮ ಬಾರಿಗೆ ಗೋವಾದ ಕೆಂಪು ಮೆಣಸು ೧೦೦೦ ರೂ ತಲುಪಿದೆ.
ಗೋವಾದಲ್ಲಿ ಪ್ರಮುಖವಾಗಿ ಉತ್ತರ ಗೋವಾದ ಮಾಂದ್ರೆ, ಮೋರಜಿಮ್ ಭಾಗದಲ್ಲಿ ಹೆಚ್ಚಾಗಿ ಈ ಕೆಂಪು ಮೆಣಸು ಬೆಳೆಯಲಾಗುತ್ತಿದೆ. ಆದರೆ ಈ ಹಿಂದೆ ಪ್ರತಿ ಕೆ.ಜಿಗೆ ೩೦೦ ರಿಂದ ೩೫೦ ರೂ ಗಳಿರುತ್ತಿದ್ದ ಕೆಂಪು ಮೆಣಸಿನ ದರ ಇದೇ ಪ್ರಪ್ರಥಮ ಬಾರಿ ೧೦೦೦ ರೂಗಳಿಗೆ ತಲುಪಿದ್ದು ಜನಸಾಮಾನ್ಯರ ಕಣ್ಣಲ್ಲಿ ನೀರು ಬರುವಂತಾಗಿದೆ.
ಗೋವಾದ ಈ ಕೆಂಪು ಮೆಣಸನ್ನು ಬಹುಮುಖ್ಯವಾಗಿ ಮಾಂಸಾಹಾರದಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ಈ ಕೆಂಪು ಮೆಣಸನ್ನು ಬೇಸಿಗೆಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಇಡಲಾಗುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button