Belagavi NewsBelgaum NewsKannada NewsKarnataka News
*ಕಳ್ಳನ ಬಂಧನಕ್ಕೆ ಸಹಕಾರಿಯಾದ ಮನೆ ಮಾಲೀಕನಿಗೆ ಪೊಲೀಸರಿಂದ ಸತ್ಕಾರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮನೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿದ್ದರಿಂದ ಮನೆಗಳ್ಳನ ಪ್ರಕರಣ ಬೇಧಿಸಲು ಸಹಕಾರ ಆಗಿರುವುದರಿಂದ ಮನೆ ಮಾಲೀಕರನ್ನು ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರು ಸತ್ಕರಿಸಿದ್ದಾರೆ.
ಮಹಾಂತೇಶ ನಗರದ ನಿವಾಸಿಗಳಾದ ಡಾ ಬಸವರಾಜ ಗೋಮಾಡಿ ಹಾಗೂ ಪ್ರಸಾದ ಹಿರೇಮಠ ಅವರನ್ನು ಸನ್ಮಾನಿಸಲಾಗಿದೆ. ಡಾ.ವಿಜಯಮಹಾಂತೇಶ್ ಅವರ ಮನೆಗಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರಿಂದ ಕಳ್ಳರ ಚಲನವಲನವನ್ನು ತ್ವರಿತವಾಗಿ ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಮನೆ ಮಾಲೀಕರನ್ನು ಪೊಲೀಸರು ಸನ್ಮಾನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ