Kannada NewsKarnataka News

ಕಿತ್ತೂರು ಕ್ಷೇತ್ರದಲ್ಲಿ ಇಂದು ಹಲವು ಕಾಮಗಾರಿಗಳ ಉದ್ಘಾಟನೆ

ಶಾಸಕ ಮಹಾಂತೇಶ ದೊಡ್ಡಗೌಡರ್ ಭಾಗಿ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು –  ಕಿತ್ತೂರ ಮತ ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ್ ಮಂಗಳವಾರ ಹಲವು ಕಾಮಗಾರಿಗಳು ಭೂಮಿ ಪೂಜೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಬೆಳಗ್ಗೆ 10:30ಕ್ಕೆ ಮುರಕೀಬಾವಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ರಸ್ತೆ ಸುಧಾರಣೆ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮ ನಡೆಸುವರು.
11 ಗಂಟೆಗೆ  ಮಲ್ಲಾಪುರ ಕೆ.ಎನ್ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಯ  ಭೂಮಿ ಪೂಜಾ ಕಾರ್ಯಕ್ರಮ ನಡೆಸಲಿದ್ದಾರೆ.
11:30ಕ್ಕೆ ಹಣಬರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸುವರು.
12 ಗಂಟೆಗೆ  ಗಜಮನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಉದ್ಘಾಟಿಸುವರು.
1 ಗಂಟೆಗೆ ಹೋಸಕೋಟಿ ಗ್ರಾಮದಲ್ಲಿ ಮುಕ್ಕಣ್ಣೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಳ್ಳುವರು.
1:30ಕ್ಕೆ ಸುನಕುಂಪಿ, ಮಾಸ್ತಮರ್ಡಿ ಕುಡಿಯುವ ನೀರಿನ ಯೋಜನೆ ಉದ್ಘಾಟನೆ, ನಂತರ ಹಣಬರಹಟ್ಟಿ ಗ್ರಾಮದ ಹತ್ತಿರ ನರೇಗಾ ಯೋಜನೆಯಡಿ ಕೊಳವೆಬಾವಿ ಗಳಿಗೆ ಹೊಸದಾಗಿ ನಿರ್ಮಿಸಿದ ಇಂಗುಗುಂಡಿಗಳ ವೀಕ್ಷಣೆ ನಡೆಸಲಿದ್ದಾರೆ.

Related Articles

Back to top button