Kannada NewsKarnataka News

*ಇನ್ಸೂರೆನ್ಸ್ ಬಾಂಡ್ ದುರಾಸೆಗೆ ಸ್ನೇಹಿತನನ್ನೆ ಮುಗಿಸಿಬಿಟ್ಟರು*

ಪ್ರಗತಿವಾಹಿನಿ ಸುದ್ದಿ: ಇನ್ಸೂರೆನ್ಸ್ ಬಾಂಡ್ ದುರಾಸೆಗಾಗಿ ಸ್ನೇಹಿತರ ಜೊತೆ ಸೇರಿ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಅಜಾದ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದುಗ್ಗೇಶ್ (34) ಎಂಬಾತ ದಾವಣಗೆರೆಯ ಆಕ್ಸಿಸ್ ಬ್ಯಾಂಕ್ ನಲ್ಲಿ 40 ಲಕ್ಷ ಮೌಲ್ಯದ ಇನ್ಸೂರೆನ್ಸ್ ಬಾಂಡ್ ಮಾಡಿಸಿದ್ದ. ಇದನ್ನು ತಿಳಿದ ಸಂಬಂಧಿ ಗಣೇಶ್ ತನ್ನ ಸ್ನೇಹಿತರಾದ ಅನಿಲ್‌, ಶಿವಕುಮಾ‌ರ್, ಮಾರುತಿ ಜೊತೆ ದುಗ್ಗೇಶ್ ನನ್ನು ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ.

Home add -Advt

ಸ್ನೇಹಿತರ ಜೊತೆ ಸೇರಿ ದುಗ್ಗೇಶ್ ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಆತನ ಮೃತದೇಹವನ್ನು ಮನೆಗೆ ತಂದು ಹಾಕಿ ಎಸ್ಕೆಪ್ ಆಗಿದ್ದಾರೆ. ಇದನ್ನು ಗಮನಿಸಿದ ಮೃತನ ತಂದೆ ಬಸವರಾಜ್ ಕೂಡಲೇ ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Back to top button