Latest

ರೈತರ ಹತ್ಯೆ; ಸಾವಿನ ಸಂಖ್ಯೆ 110ಕ್ಕೇರಿಕೆ

ಪ್ರಗತಿವಾಹಿನಿ ಸುದ್ದಿ; ನೈಜೀರಿಯಾ: ಈಶಾನ್ಯ ನೈಜೀರಿಯಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಇವರಲ್ಲಿ ಬಹುತೇಕ ರೈತರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳುಸಿದ್ದಾರೆ.

ಬೊರ್ನೊ ರಾಜ್ಯದ ಮೈಡುಗುರಿ ಬಳಿಯ ಜೆರೆ ಸ್ಥಳೀಯ ಸರ್ಕಾರಿ ಪ್ರದೇಶದ ಕೊಸೋಬೆ ಗ್ರಾಮ ಹಾಗೂ ಇನ್ನಿತರ ಭಾಗದಲ್ಲಿ ಹೊಲದಲ್ಲಿ ಕೊಯ್ಲು ಮಾಡುತ್ತಿದ್ದವರ ಮೇಲೆ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿ ಹಲವರನ್ನು ಹತ್ಯೆಗೈದಿದ್ದು, ಅನೇಕ ಮಹಿಳೆಯರನ್ನು ಅಪಹರಿಸಿದ್ದಾರೆ.

Home add -Advt

ಇದೀಗ ಸಾವಿನ ಸಂಖ್ಯೆ 110ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ಬಹುತೇಕರು ರೈತರು, ಮೀನುಗಾರರು, ನಾಗರಿಕರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button