ವ್ಯಕ್ತಿ ನಾಪತ್ತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದ ೩೫ ವಯಸ್ಸಿನ ನಾಮದೇವ ಗಾವಡು ಪಾಟೀಲ ನಾಪತ್ತೆಯಾಗಿದ್ದಾರೆ.
ಗ್ರಾಮದ ಲಕ್ಷ್ಮೀಗಲ್ಲಿಯ ನಿವಾಸಿಯಾಗಿರುವ ನಾಮದೇವ ಪಾಟೀಲ ಕಳೆದ ಜನವರಿ ೨೧ರ ಶುಕ್ರವಾರದಂದು ಮಧ್ಯಾಹ್ನ ೧೨ ಗಂಟೆಗೆ ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಹೊರಟು ಹೋದವರು ಮರಳಿ ಮನೆಗೆ ಬರದೇ ಇದ್ದಿದ್ದರಿಂದ ಸಹೋದರ ಶೇಟ್ಟುಪಾ ಗಾವುಡು ಪಾಟೀಲ ಅವರು ನಾಮದೇವ ನಾಪತ್ತೆಯಾಗಿದ್ದಾನೆಂದು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆ ವ್ಯಕ್ತಿ ವಿವರ:
ನಾಪತ್ತೆಯಾದ ೩೫ ವರ್ಷದ ನಾಮದೇವ ಪಾಟೀಲ ಎಸ್.ಎಸ್.ಎಲ್.ಸಿ ಓದಿದ್ದು ೫ ಅಡಿ ೭ ಇಂಚು ಎತ್ತರವಾಗಿದ್ದಾರೆ. ಉದ್ದ ಮುಖ, ಉದ್ದ ಮೂಗು, ಗೋದಿ ಮೈಬಣ್ಣ, ಸದೃಢ ಮೈಕಟ್ಟು ಹೊಂದಿರುವ ಇವರು ಮನೆಯಿಂದ ಹೊರಡುವಾಗ ಲೈಟ್‌ಪಿಸ್ತಾ ಬಣ್ಣದ ಶರ್ಟ್, ಡಾರ್ಕ್ ಬಣ್ಣದ ಪ್ಯಾಂಟ್ ಧರಿಸಿದ್ದರು, ಮರಾಠಿ ಭಾಷೆಯನ್ನು ಬಲ್ಲವರಾಗಿದ್ದಾರೆ.
ನಾಪತ್ತೆಯಾದ ವ್ಯಕ್ತಿಯ ಸುಳಿವು ಸಿಕ್ಕವರು ಕೂಡಲೇ ಕಾಕತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕಾಕತಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆ ನಾಪತ್ತೆ
ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದ ೨೪ ವಯಸ್ಸಿನ ಕೋಮಲ ಸುಭಾಶ ಪಾಟೀಲ ನಾಪತ್ತೆಯಾಗಿದ್ದಾಳೆ. ಗ್ರಾಮದ ಮರಗಾಯಿ ನಗರದ ನಿವಾಸಿಯಾಗಿರುವ ಕೋಮಲ ಪಾಟೀಲ ಕಳೆದ ಜನವರಿ ೨೧ರ ಶುಕ್ರವಾರದಂದು ಮಧ್ಯಾಹ್ನ ೧ ಗಂಟೆಗೆ ಮನೆಯಿಂದ ಹೊರಟು ಹೋದವಳು ಮರಳಿ ಮನೆಗೆ ಬರದೇ ಇದ್ದಿದ್ದರಿಂದ ಈಕೆಯ ಗಂಡ ಸುಭಾಷ ಬಾಬು ಪಾಟೀಲ ಅವರು ಪತ್ನಿ ಕೋಮಲ ಪಾಟೀಲ ನಾಪತ್ತೆಯಾಗಿದ್ದಾಳೆಂದು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆ ಮಹಿಳೆ ವಿವರ:
ನಾಪತ್ತೆಯಾದ ೨೪ ವರ್ಷದ ಕೋಮಲ ಸುಭಾಶ ಪಾಟೀಲ ಎಸ್.ಎಸ್.ಎಲ್.ಸಿ ಓದಿದ್ದು ೫ ಅಡಿ ೧ ಇಂಚು ಎತ್ತರವಾಗಿದ್ದಾಳೆ. ಉದ್ದ ಮುಖ, ಉದ್ದ ಮೂಗು, ಕಪ್ಪು ಮೈಬಣ್ಣ, ಬಡಕಲು ಶರೀರ ಹೊಂದಿರುವ ಈಕೆ ಮನೆಯಿಂದ ಹೊರಡುವಾಗ ಹಳದಿ ಕಲರ್ ಚೂಡಿದಾರ್, ಕಪ್ಪು ಕಲರ್ ಸ್ಕಾರ್ಫ್ ಧರಿಸಿದ್ದಳು, ಮರಾಠಿ, ಕನ್ನಡ ಭಾಷೆಯನ್ನ ಬಲ್ಲವಳಾಗಿದ್ದಾಳೆ.
ನಾಪತ್ತೆಯಾದ ಮಹಿಳೆಯ ಸುಳಿವು ಸಿಕ್ಕವರು ಕೂಡಲೇ ಕಾಕತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕಾಕತಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರದುರ್ಗ ಬಳಿ ಭೀಕರ ಅಪಘಾತಕ್ಕೆ ಬೆಳಗಾವಿಯ ಮೂವರು ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ