Latest

‘ಮೋದಿ ಉಪನಾಮ’ ಪ್ರಕರಣ; ರಾಹುಲ್ ಅರ್ಜಿ ವಜಾ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ‘ಮೋದಿ ಉಪನಾಮ’ ಪ್ರಕರಣದಲ್ಲಿ ದೋಷಾರೋಪಕ್ಕೆ ತಡೆ ಕೋರಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ ನ ಸೆಷನ್ಸ್ ನ್ಯಾಯಾಲಯ ಗುರುವಾರ ವಜಾಗೊಳಿಸಲಾಗಿದೆ.

ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ನೀಡುವಂತೆ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಪಿ.ಮೊಗೇರ ಅವರ ನ್ಯಾಯಪೀಠ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಪಿ.ಮೊಗೇರ ಅವರ ನ್ಯಾಯಪೀಠವು ಪ್ರಕರಣದಲ್ಲಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಳ ನ್ಯಾಯಾಲಯದ ಆದೇಶದ ವಿರುದ್ಧದ ಮೇಲ್ಮನವಿಯನ್ನು ಬಾಕಿಯಿರುವಂತೆ ತಡೆಯಲು ರಾಹುಲ್ ಗಾಂಧಿಯವರ ಅರ್ಜಿಯ ತೀರ್ಪನ್ನು ಏಪ್ರಿಲ್ 20 ಕ್ಕೆ ಕಾಯ್ದಿರಿಸಿತ್ತು.

2019 ರಲ್ಲಿ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯವರು “ಎಲ್ಲ ಕಳ್ಳರಿಗೆ ಮೋದಿ ಅವರ ಉಪನಾಮ ಹೇಗೆ?” ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ಸಂಬಂಧಿಸಿ ಹೂಡಲಾಗಿದ್ದ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಅವರು ತಮ್ಮ ಹೇಳಿಕೆಗಳ ಮೇಲೆ ದೋಷಿ ಎಂದು ಸಾಬೀತಾದ ನಂತರ ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು.

ಪ್ರಭಾವಗಳ ಮೂಲಕ ತಮಗೆ ಸಂಸದ ಸ್ಥಾನ ವಂಚಿಸಿದ ನಂತರ ವಿಚಾರಣಾ ನ್ಯಾಯಾಲಯವು ತನ್ನನ್ನು ಕಠಿಣವಾಗಿ ನಡೆಸಿಕೊಂಡಿದೆ ಎಂದು ಗಾಂಧಿ ಅರ್ಜಿಯಲ್ಲಿ ದೂರಿದ್ದರು.

ಹಾಲಿ ಬೆಳವಣಿಗೆ ನಂತರ ಕಾನೂನಿನಡಿಯಲ್ಲಿ ಇನ್ನೂ ಲಭ್ಯವಿರುವ ಎಲ್ಲ ಆಯ್ಕೆಗಳನ್ನು ರಾಹುಲ್ ಪಡೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

https://pragati.taskdun.com/a-sri-ramakrishna-charitram-dance-program-on-23rd/

https://pragati.taskdun.com/pose-without-pant-netizens-clean-bold-for-sravantis-boldness/
https://pragati.taskdun.com/let-parents-and-students-work-plans-for-summer-vacation-like-this/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button