Kannada NewsKarnataka News

ಮಗನ ಸಾವಿನ ಸುದ್ದಿ ತಿಳಿದ ತಾಯಿಯೂ ಹೃದಯಾಘಾತದಿಂದ ಸಾವು; ಸಹೋದರ ಪ್ರಜ್ಞಾಹೀನ

ಪ್ರಗತಿವಾಹಿನಿ ಸುದ್ದಿ, ಸುರೇಬಾನ: ಮಗ ಮೃತಪಟ್ಟ ಸುದ್ದಿ ತಿಳಿದು ತಾಯಿ ಸಹ ಮೃತಪಟ್ಟಿದ್ದು, ಒಂದೇ ಕುಟುಂಬದ ಇಬ್ಬರು  ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬುಧವಾರ ಸಂಜೆ ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಹಂಪಿಹೊಳಿ ಗ್ರಾಮದಲ್ಲಿ ನಡೆದಿದೆ.
 ಬಾಲಪ್ಪ ವೆಂಕಪ್ಪ ತಳವಾರ(೫೦), ಬಾಲಪ್ಪನ ತಾಯಿ ರುದ್ರವ್ವ ವೆಂ‌ ತಳವಾರ(೭೦) ಮೃತಪಟ್ಟ ದುರ್ದೈವಿಗಳು.
  ಹಣ್ಣಿನ ಸುಗ್ಗಿ ಬಂತೆಂದರೆ ಸಾಕು ಮೃತ ಬಾಲಪ್ಪ ಮರವೆರಿ ನೇರಲ ಹಣ್ಣು ಹರಿಯತ್ತಿದ್ದ. ಆದರೆ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಬಾಲಪ್ಪ ಸಾವನ್ನಪ್ಪದ್ದಾನೆ.
ಇವರು ಹಣ್ಣಿನ ವ್ಯಾಪಾರ ಮಾಡುತ್ತಿದ್ದರು ಎಂದು ಸ್ಥಳೀಯರಿಂದ ತಿಳಿದು ಬಂದಿದೆ.
ಮಗ ಬಾಲಪ್ಪ ಸಾವನ್ನಪ್ಪಿದ ಸುದ್ದಿ ತಿಳಿದ ವೃದ್ಧ ತಾಯಿ ರುದ್ರವ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇನ್ನೋರ್ವ ಮಗ ಮಾರುತಿ ವೆಂ ತಳವಾರ ಅಣ್ಣ ಹಾಗೂ ತಾಯಿ ಮೃತಪಟ್ಟ ಸುದ್ದಿ ತಿಳಿದು ಪ್ರದ್ನಾಹಿನನಾಗಿದ್ದು, ಸ್ಥಳೀಯರ ಸಹಾಯದಿಂದ ಸುರೇಬಾನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

https://pragati.taskdun.com/a-head-on-collision-between-a-ksr-tc-bus-and-a-car/

Home add -Advt

Related Articles

Back to top button