ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರ ಧ್ವಜ ಹಾರಾಟಕ್ಕೆ ಒಂದು ಮಾರ್ಗಸೂಚಿ (ಧ್ವಜ ಸಂಹಿತೆ) ಎನ್ನುವುದಿದೆ. ಅದನ್ನು ತಪ್ಪಿ ಹಾರಿಸಿದಲ್ಲಿ ಅದು ಶಿಕ್ಷಾರ್ಹ ಅಪರಾಧವೆನಿಸುತ್ತದೆ.
ಬೆಳಗಾವಿಯಲ್ಲಿ ರಾಷ್ಟ್ರದ ಅತೀ ಎತ್ತರ ರಾಷ್ಟ್ರಧ್ವಜ ಕಂಬ ನಿರ್ಮಾಣವಾಗಿದೆ. ಆದರೆ ಅದರ ಮೇಲೆ ಹಾರಾಡುತ್ತಿರುವ ರಾಷ್ಟ್ರಧ್ವಜ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಅದು ಹಾರಾಡಿದರೂ ಸುದ್ದಿ, ಹಾರಾಡದಿದ್ದರೂ ಸುದ್ದಿಯಾಗುತ್ತಿದೆ. ಅದರ ನಿರ್ವಹಣೆಯೇ ಆಡಳಿತಕ್ಕೆ ತೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೆಲವೇ ತಿಂಗಳ ಹಿಂದೆ ಧ್ವಜ ಹರಿದುಹೋಗಿತ್ತು ಈ ಕುರಿತು ಸುದ್ದಿಯಾಗುತ್ತಿದ್ದಂತೆ ಕೆಳಗಿಳಿಸಿ, ಮತ್ತೆ ಏರಿಸುವ ಗೋಜಿಗೆ ಹೋಗದೆ ಹಾಗೆಯೇ ಬಿಡಲಾಗಿತ್ತು. ಇಷ್ಟೊಂದು ಖರ್ಚು ಮಾಡಿ ಧ್ವಜ ಹಾರಿಸದೆ ಬಿಟ್ಟಿದ್ದಕ್ಕೆ ಆಕ್ಷೇಪಗಳು ಬರುತ್ತಿದ್ದಂತೆ ಮತ್ತೆ ಧ್ವಜವನ್ನು ಹಾರಿಸಲಾಯಿತು.
ಆದರೆ ಇದೀಗ ಧ್ವಜ ಕೆಳಮಟ್ಟದಲ್ಲಿ ಹಾರಾಡುತ್ತಿದೆ. ಕಂಬದ ಅತ್ಯಂತ ತುಟ್ಟ ತುದಿಯಲ್ಲಿ ಧ್ವಜ ಹಾರಾಡಬೇಕು. ಅದು ಬಿಟ್ಟು ಕೆಳಗೆ ಹಾರಾಡುವುದು ಅಶುಭ ಸೂಚಕವೆನಿಸುತ್ತದೆ. ಸಂತಾಪಸೂಚಕದ ವೇಳೆ ಅರ್ಧಮಟ್ಟಕ್ಕೆ ಧ್ವಜ ಹಾರಿಸಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಹೀಗೆ ಕೆಳಮಟ್ಟದಲ್ಲಿ ಹಾರಾಡುವುದು ಧ್ವಜ ಸಂಹಿತೆಗೆ ವಿರುದ್ಧವಾದುದು.
ಸಂಬಂಧಪಟ್ಟವರು ಕೂಡಲೇ ಧ್ವಜವನ್ನು ಮೇಲೇರಿಸಿ ಅದಕ್ಕೆ ಸಲ್ಲಬೇಕಾದ ಗೌರವ ಸಲ್ಲಿಸಬೇಕು. ಅದನ್ನು ಬಿಟ್ಟು ಹೀಗೆಬಿಟ್ಟರೆ ಅದು ರಾಷ್ಟ್ರ ಧ್ವಜಕ್ಕೆ ಮಾಡುವ ಅಗೌರವವೆನಿಸುತ್ತದೆ. ಅಂತವರು ಶಿಕ್ಷೆಗೂ ಅರ್ಹರಾಗುತ್ತಾರೆ.
ಮುಂದಿನ 14 ತಿಂಗಳು ಕಾಲ ಜನರ ರಾಜಕಾರಣ, ಜನೆವರಿಯಲ್ಲಿ ಉದ್ಯೋಗ ಕ್ರಾಂತಿ – CM ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ