Kannada NewsKarnataka NewsNational

*ಗುಟ್ಕಾ ತಂದು ಕೊಡದ ಕಾರಣ ಪಕ್ಕದ ಮನೆಯ ಬಾಲಕಿ ಕೊಲೆ ಮಾಡಿದ ದುರುಳ*

ಪ್ರಗತಿವಾಹಿನಿ ಸುದ್ದಿ; ಗುಟ್ಕಾ ತಂದು ಕೊಡದ ಕಾರಣ ಪಕ್ಕದ ಮನೆಯ ವ್ಯಕ್ತಿ  ಬಾಲಕಿ ಕೊಲೆ ಮಾಡಿದ್ದು, ಎರಡು ತಿಂಗಳ ಬಳಿಕ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.‌

ಏಪ್ರಿಲ್ 18 ರಂದು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಬಾಲಕಿ ಅನುಶ್ರೀ (7) ನಾಪ್ಪತ್ತೆ ಆಗಿದ್ದಳು. ಬಾಲಕಿ ಎಲ್ಲಿಯೂ ಸಿಗದ ಹಿನ್ನಲೆ ಬಾಲಕಿ ಪೋಷಕರು ಎಪ್ರೀಲ್ 20 ರಂದು ಕೊಪ್ಪಳ ಮಹಿಳಾ ಠಾಣೆಯಲ್ಲಿ ಬಾಲಕಿ ನಾಪತ್ತೆ ಪ್ರಕರಣ ದಾಖಲಿಸಿದರು. ಆದರೆ ಏಪ್ರಿಲ್ 21 ರಂದು ಬಾಲಕಿ ಶವ ಪತೆಯಾಗಿ, ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಸಿದ್ದಲಿಂಗಯ್ಯ ನಾಯ್ಕ್ (51) ಎಂಬಾತನೆ ಕೊಲೆ ಮಾಡಿದ್ದಾನೆ ಎಂದು ದೃಢಪಡಿಸಿದ್ದಾರೆ.‌

ಆರೋಪಿ ಸಿದ್ದಲಿಂಗಯ್ಯ ನಾಯ್ಕ್  ಬಾಲಕಿಗೆ ಗುಟ್ಕಾ ತರಲು ಹೇಳಿದ್ದಾನೆ ಆದರೆ ಬಾಲಕಿ ಆರೋಪಿ ಮಾತು ಕೇಳದ ಹಿನ್ನಲೆ ಕೋಲಿನಿಂದ ಬಾಲಕಿಯ ತಲೆಗೆ ಹೊಡೆದಿದ್ದ, ತಲೆಗೆ ಜೋರಾದ ಪೆಟ್ಟು ಬಿದ್ದ ಹಿನ್ನೆಲೆ ಬಾಲಕಿ ಸ್ಥಳದಲ್ಲೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಆದರೆ ಬಾಲಕಿ ಸಾವನ್ನಪ್ಪಿರೊ ಭಯದಲ್ಲಿ ಚೀಲದಲ್ಲಿ ತುಂಬಿ ಮನೆಯ ಹಿಂದೆ ಇಟ್ಟಿದ್ದ, ಚೀಲದಲ್ಲಿ ತುಂಬಿದ ಹಿನ್ನೆಲೆ ಉಸಿರುಗಟ್ಟಿ ಬಾಲಕಿ ಸಾವುನ್ನಪ್ಪಿದ್ದಾಳೆ. ಬಳಿಕ ಆರೋಪಿ ಸಾಕ್ಷಿ ಸಿಗದಂತೆ ಬಾಲಕಿಯ ಶವವನ್ನು ಗೊಬ್ಬರ ಚೀಲದಲ್ಲಿ ಕಟ್ಟಿ ಎಸೆದಿದ್ದಾನೆ.‌ ಶವದ ವಾಸನೆ ಬರಲು ಶುರುವಾದ ಹಿನ್ನೆಲೆ ಚೀಲ ಆರೋಪಿ ಇಟ್ಟಿದ್ದ ಸ್ಥಳ ಬದಲಾವಣೆ ಮಾಡಿದ್ದ. 

Home add -Advt

ಆದರೆ ಪ್ರಕರಣ ಜಾಡುಹಿಡಿದು ತನಿಖೆ ಮಾಡಿದ ಪೊಲೀಸರು. ಎರಡು ತಿಂಗಳ ನಂತರ ಬಾಲಕಿಯ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.‌ ಬಾಲಕಿಯ ಪಕ್ಕದ ಮನೆಯ ಸಿದ್ದಲಿಂಗಯ್ಯ ಎಂಬಾತದ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button