ಪ್ರಗತಿವಾಹಿನಿ ಸುದ್ದಿ, ಮುಂಬೈ: 2024 ರ T20 ವಿಶ್ವಕಪ್ ಅನ್ನು ಹೊಸ ಸ್ವರೂಪದಲ್ಲಿ ಆಡಲಾಗುತ್ತದೆ.
ಹೊಸ ಸ್ವರೂಪ ಇದೀಗ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ. T20 ಯ ಬದಲಾದ ಸ್ವರೂಪಗಳ ಬಗ್ಗೆ ಹೊಸಹೊಸ ಕಲ್ಪನೆಗಳನ್ನು ಅನೇಕರು ಮನದಲ್ಲೇ ಮೆಲುಕು ಹಾಕುತ್ತಿದ್ದಾರೆ. ಆದರೆ ಬದಲಾದ ಸ್ವರೂಪ ಹೀಗಿರಲಿದೆ.
ಇದರಲ್ಲಿ ಭಾಗವಹಿಸುವ 20 ದೇಶಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಸುತ್ತಿಗೆ ಸೂಪರ್ ಎಂಟು ಹಂತವನ್ನು ಅನುಸರಿಸಲಾಗುತ್ತದೆ. ಎರಡು ಸೂಪರ್ ಎಂಟು ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿ-ಫೈನಲ್‌ಗೆ ಹೋಗುತ್ತವೆ. ನಂತರ ಫೈನಲ್‌ಗೆ ಬರಲಿದೆ.
ಅದೆಲ್ಲದಕ್ಕೂ ಮುನ್ನ 20 ತಂಡಗಳನ್ನು ನಿರ್ಧರಿಸಬೇಕಿದೆ. ಆತಿಥೇಯರಾಗಿ, ವೆಸ್ಟ್ ಇಂಡೀಸ್ ಮತ್ತು USA 2024 ಕ್ಕೆ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಳ್ಳುತ್ತವೆ. 2024 ರ ಜೂನ್ ವೇಳೆಗೆ T20 ಪಂದ್ಯ ನಡೆಯುವ ಸಾಧ್ಯತೆಗಳಿವೆ.
ಕುಡಿದ ನೀರೇ ಬ್ರೂಸ್ ಲೀ ಜೀವಕ್ಕೆ ಮುಳುವಾಯಿತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ