ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮ್ಯಾನ್ಮಾರ್ ಸೇನೆ ಹಳ್ಳೀಯೊಂದರ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಸೇನಾ ಆಡಳಿತದ ವಿರೋಧಿಗಳು ಪಾಜಿ ಗೈ ಗ್ರಾಮದಲ್ಲಿ ಸಮಾರಂಭ ನಡೆಸಿ ಕಚೇರಿಯೊಂದನ್ನು ತೆರೆಯುವಾಗ ಈ ದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು 20 ರಿಂದ 30 ಮಕ್ಕಳು ಹಾಗೂ ಸ್ಥಳೀಯವಾಗಿ ರಚಿಸಲಾದ ಸರಕಾರಿ ವಿರೋಧಿ ಸಶಸ್ತ್ರ ಗುಂಪುಗಳು ಮತ್ತು ಇತರ ವಿರೋಧ ಸಂಘಟನೆಗಳ ನಾಯಕರು ಸೇರಿದ್ದಾರೆ.
ಫೆಬ್ರವರಿ 2021 ರಲ್ಲಿ ನಡೆದ ದಂಗೆಯಲ್ಲಿ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ 3,000 ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ