ಪ್ರಗತಿವಾಹಿನಿ ಸುದ್ದಿ: ಸುಪಾರಿ ಹಂತಕನೊಬ್ಬ ಕೊಲೆ ಮಾಡಿದ ಮೇಲೆ ಹಣ ನೀಡಿಲ್ಲ ಎಂದು ನೇರವಾಗಿ ಪೊಲೀಸ್ ಠಾಣೆಯಲ್ಲಿ ಸುಪಾರಿ ನೀಡಿದವನ ಮೇಲೆ ದೂರು ನೀಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಪೋಲಿಸ್ ವರದಿಯ ಪ್ರಕಾರ, ಸುಪಾರಿ ಕಿಲ್ಲರ್ ಆಗಿದ್ದ ನೀರಜ್ ಶರ್ಮಾ ಎಂಬಾತನಿಗೆ ಕಳೆದ ವರ್ಷ ವಕೀಲೆ ಅಂಜಲಿ ಗರ್ಗ್ ಎಂಬುವವರನ್ನು ಕೊಲೆ ಮಾಡಲು ವ್ಯಕ್ತಿಯೊಬ್ಬ 20 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದ.
ಅದರಂತೆ ಜೂನ್ 7, 2023 ರಂದು, ಮೀರತ್‌ನ ಟಿಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಉಮೇಶ್ ವಿಹಾರ್ ಕಾಲೋನಿಯ ನಿವಾಸಿ ಅಂಜಲಿ ಅವರು ಡೈರಿಯಿಂದ ಮನೆಗೆ ವಾಪಸ್ ಬರುತ್ತಿರುವಾಗ ನೀರಜ್ ಶರ್ಮಾ ಹಾಗೂ ಆತನ ಸಹಚರ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಆಸ್ತಿ ವಿವಾದದಲ್ಲಿ ತೊಡಗಿದ್ದ ಸಂತ್ರಸ್ತೆಯ ವಿಚ್ಚೇದಿತ ಪತಿ ಮತ್ತು ಅತ್ತೆಯನ್ನು ಪೊಲೀಸರು ಆರಂಭದಲ್ಲಿ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆದರೆ ಕೊಲೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.
ಕೊಲೆಯಾದ ಕೆಲ ದಿನಗಳ ಬಳಿಕ ನೀರಜ್ ಹಾಗೂ ಮತ್ತಿಬ್ಬರು ಅಂಜಲಿಯನ್ನು ಕೊಲ್ಲಲು 20 ಲಕ್ಷಕ್ಕೆ ಗುತ್ತಿಗೆ ನೀಡಿದ್ದರು ಎಂದು ಬಹಿರಂಗವಾಗಿದೆ. ಅದರಂತೆ ಯಶಪಾಲ್, ಭಾಟಿಯಾ, ಶರ್ಮಾ ಮತ್ತು ಅಂಜಲಿಗೆ ಗುಂಡು ಹಾರಿಸಿದ ಇಬ್ಬರು ಹಂತಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಈ ಘಟನೆಯಾಗಿ ಒಂದು ವರ್ಷದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಶರ್ಮಾ ನೇರವಾಗಿ ಅಂಜಲಿಯ ಅತ್ತೆ ಮನೆಗೆ ಹೋಗಿ ಉಳಿದ ಹಣ ನೀಡುವಂತೆ ಕೇಳಿದ್ದಾನೆ. ಆದರೆ ಅದಕ್ಕೆ ಅಂಜಲಿ ಅತ್ತೆ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಇದರಿಂದ ಸಿಟ್ಟಾದ ಶರ್ಮಾ, ನೇರವಾಗಿ ಮೀರತ್‌ನ ಟಿಪಿ ನಗರ ಪೊಲೀಸ್ ಠಾಣೆಗೆ ಹೋಗಿ ಅಂಜಲಿಯನ್ನು ಕೊಲ್ಲಲು 20 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು ಮತ್ತು 1 ಲಕ್ಷವನ್ನು ಮುಂಗಡವಾಗಿ ನೀಡಿದ್ದಾರೆ. ಬಂಧನದಿಂದಾಗಿ ಉಳಿದ ₹ 19 ಲಕ್ಷ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಆದರೆ ಇದೀಗ ಉಳಿದ ಹಣವನ್ನು ಪಡೆಯಲು ಹೋದರೆ ನಿರಾಕರಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಅತ್ತೆ ಹಾಗೂ ವಿಚ್ಛೇದಿತ ಪತಿಯನ್ನು ನಗರ ಪೊಲೀಸರು ಬಂದಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ