
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯದ ಶಕ್ತಿ ಕೇಂದ್ರ ವಿಧಾನ ಸೌಧದ ಸೆಕ್ಯೂರಿಟಿ ಸ್ಕ್ಯಾನಿಂಗ್ ಮಷಿನಗಳು 2 ವರ್ಷದಿಂದ ದುರಸ್ತಿಯಲ್ಲಿದ್ದು, ಭದ್ರತೆಯ ದೃಷ್ಟಿಯಿಂದ ವಿಧಾನಸೌಧವೂ ಸುರಕ್ಷಿತವಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು ಉಪ ಪೊಲೀಸ್ ಆಯುಕ್ತರ ಕಛೇರಿ ವಿಧಾನ ಸೌಧದ ಭದ್ರತಾ ವಿಭಾಗ ಬೆಂಗಳೂರು ನಗರದ ಸಾರ್ವಜನಿಕ ಅಧಿಕಾರಿ ಸ್ಕ್ಯಾನಿಂಗ್ ಮಷಿನಗಳು 2015 ರಿಂದ 2021 ರವರೆಗೆ ಚಾಲ್ತಿಯಲ್ಲಿದ್ದು 2021 ರ ದುರಸ್ತಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ಮಾಹಿತಿಯನ್ನು ಪಡೆದ ವಕೀಲ ಉಗಾರೆ ಇವರು ವಿಧಾನ ಸೌಧದ ಸೆಕ್ಯೂರಿಟಿ ಸ್ಕ್ಯಾನಿಂಗ್ ಮಷಿನ್ಗಳು ದುರಸ್ತಿಯಲ್ಲಿವೆ ಎಂದರೆ ಹೇಗೆ ? ಒಂದೊಮ್ಮೆ ಸರಕಾರದ ಹತ್ತಿರ ಹಣವಿಲ್ಲ ಎಂದಾದರೆ ವಿಧಾನ ಸೌಧದ ಭದ್ರತಾ ವಿಭಾಗದ ಸಿಬ್ಬಂಧಿ ‘ವಿಧಾನ ಸೌಧ’ವನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಇಂತಹ ಪ್ರಮುಖ ಸ್ಥಳಗಳ ಭದ್ರತೆಗೆ ಅತ್ಯಗತ್ಯವಾಗಿರುವ ಸೆಕ್ಯುರಿಟಿ ಸ್ಕ್ಯಾನಿಂಗ್ ಮಷಿನ್ ಗಳು ಕೆಟ್ಟು 2 ವರ್ಷವಾದರೂ ದುರಸ್ತಿ ಮಾಡದಿರಲು ಕಾರಣವೇನು ಎನ್ನುವ ಪ್ರಶ್ನೆ ಮೂಡಿದೆ. ಬೆಂಗಳೂರಿನಲ್ಲೇ ಉಗ್ರರು ಪತ್ತೆಯಾಗುತ್ತಿರಪುವ ಸಂದರ್ಭದಲ್ಲೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸವಾಗಿದೆ.
https://pragati.taskdun.com/d-k-shivakumarmadduruprajadhwani/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ