Kannada NewsKarnataka NewsLatest

ಹೆಣ್ಣಿನ ವಿಷಯದಲ್ಲಿ ತಂಟೆ: ವ್ಯಕ್ತಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ;  ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ವ್ಯಕ್ತಿಯೋರ್ವ ಮಾನಸಿಕ ಕಿರುಕುಳದಿಂದ ಜಿಗುಪ್ಸೆಗೊಂಡು ನೇಣು ಹಾಕಿಕೊಂಡಿದ್ದಾನೆ.
ಮಲ್ಲಪ್ಪಾ ಹೆಳೆಪ್ಪಾ ಮನಗಾಂವಿ (೪೫) ಮೃತ ವ್ಯಕ್ತಿ. ಹೆಣ್ಣಿನ ವಿಷವಾಗಿ ತಂಟೆ ತೆಗೆದು ಅದೇ ಗ್ರಾಮದ ಉಪ್ಪಾರಟ್ಟಿ ಕುಟುಂಬದವರಾದ ಭೀಮಪ್ಪಾ, ಸುರೇಶ ಮತ್ತು ಅಣ್ಣಪ್ಪಾ (ಮೂವರು ಸಹೋದರರು) ಕೂಡಿ  ಮಲಪ್ಪನಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದರಿಂದ ಇದನ್ನು ತಾಳಲಾರದೆ ಜಿಗುಪ್ಸೆಗೊಂಡು ಗ್ರಾಮದ ಕಳ್ಳಮಾರ ಹಳ್ಳದ ಹತ್ತಿರದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಈ ಮೂರು ಜನ ಕಾರಣವೆಂದು ಅವನ ಸಹೋದರ ಗಿರಿಮಲ್ಲಪ್ಪಾ ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Home add -Advt

Related Articles

Back to top button