Kannada NewsKarnataka News
ರಾಷ್ಟ್ರ ನಿರ್ಮಾಣದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಅತ್ಯಂತ ಪ್ರಮುಖ – ಲಕ್ಷ್ಮೀ ಹೆಬ್ಬಾಳಕರ್



ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟಿದ್ದಾರೆ.
ರಾಕಸಕೊಪ್ಪ ಗ್ರಾಮದ ಶ್ರೀ ಮ್ಹಾರತಾಳ ದೇವಸ್ಥಾನದ ಯಾತ್ರೋತ್ಸವ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರು ದಿನದ 24 ಗಂಟೆಯೂ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಮಧ್ಯೆಯೇ ಇರುತ್ತಾರೆ. ತಮ್ಮದೇ ಜನ್ಮ ಭೂಮಿಯಲ್ಲಿ ಕೆಲಸ ಮಾಡುವ ಸದವಕಾಶ ಅವರಿಗಿರುತ್ತದೆ. ಯಾವುದಾದರೊಂದು ಕೆಲಸ ಮಾಡಿಕೊಟ್ಟಾಗ ಜನರ ಮುಖದಲ್ಲಿ ಸಂತಸ ಮೂಡುವುದನ್ನು ಕಣ್ಣಾರೆ ಕಾಣಲು ಸಾಧ್ಯವಾಗುತ್ತದೆ. ಇದರಿಂದ ಜನ್ಮ ಸಾರ್ಥಕವಾಯಿತೆನ್ನುವ ತೃಪ್ತಿಕರ ಭಾವನೆ ಮೂಡುತ್ತದೆ. ಹಾಗಾಗಿ ಇರುವ ಸೀಮಿತ ಅವಕಾಶದಲ್ಲೂ ಹೆಚ್ಚಿನ ಸೇವೆ ಮಾಡುವ ಪ್ರಯತ್ನ ಮಾಡಬೇಕು ಎಂದು ಹೆಬ್ಬಾಳಕರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು, ಲಕ್ಷ್ಮಣ ಕಾಂಬಳೆ, ಅಮಿತ ಕಾಂಬಳೆ, ಭರ್ಮು ಕಾಂಬಳೆ, ಮಹೇಶ ಪಾಟೀಲ, ಮನೋಹರ ಬೆಳಗಾಂವ್ಕರ, ನಾಮದೇವ್ ಮೋರೆ, ವಿಲಾಸ ಪಾಟೀಲ, ಪೂಜಾ ಸುತಾರ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ