Kannada NewsLatest

ಕರ್ನಾಟಕ ಏಕೀಕರಣ ಚಳುವಳಿ : ಬೆಳಗಾವಿ ಜನರ ಪಾತ್ರ , ಮತ್ತಷ್ಟು ಸಾಕ್ಷ್ಯ ಲಭ್ಯ

ಕರ್ನಾಟಕ ಏಕೀಕರಣ ಚಳುವಳಿ : ಬೆಳಗಾವಿ ಜನರ ಪಾತ್ರ , ಮತ್ತಷ್ಟು ಸಾಕ್ಷ್ಯ ಲಭ್ಯ

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯ ಸಕ್ರೀಯ: ಮತ್ತಷ್ಟು ಸಾಕ್ಷ್ಯ.1956ರ ಏಕೀಕರಣ ಸಭೆಯ ಆಹ್ವಾನ ಪತ್ರ ಹಾಗೂ ಔತಣದೋಲೆ ಲಭ್ಯ.

ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಮುಂಬೈ ಕರ್ನಾಟಕ ಪ್ರಾಂತ್ಯದ ಪಾತ್ರಕ್ಕೆ ಇನ್ನಷ್ಟು ಸಾಕ್ಷ್ಯಗಳು ಲಭ್ಯವಾಗಿವೆ. ಏಕೀಕೃತ ಕರ್ನಾಟಕ ಹೋರಾಟದಲ್ಲಿ ಬೆಳಗಾವಿ ಭಾಗದ ಜನರು ಕೂಡ ಸಕ್ರೀಯವಾಗಿ ದುಡಿದ್ದರು.

ಇದಕ್ಕೆ ಪೂರಕವೆಂಬಂತೆ 1956ರ ಜನೇವರಿ 10ರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲೆಯ ಕರ್ನಾಟಕ ಏಕೀಕರಣ ಪರಿಷತ್ತ ಸಭೆ ಜರುಗಿರುವ ಕುರಿತು ಆಹ್ವಾನ ಪತ್ರ ಹಾಗೂ ಔತಣದೋಲೆಗಳು ದೊರತಿವೆ.

ಬೆಳಗಾವಿ ಖಾಯಂ ಜನತಾ ನ್ಯಾಯಾಲಯದ ಸದಸ್ಯ ಅನಿಲಕುಮಾರ ಬಾಳಗೌಡ ಪಾಟೀಲರ ಸಹಕಾರದಿಂದ ಅಂಕಲಿಯ ಅರುಣ ಪ್ರಿಟಿಂಗ ಪ್ರೆಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಜಯ ಚಿದಾನಂದ ಪಾಟೀಲ ಅವರು ಗಡಿತಜ್ಞ ಹಾಗೂ ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರ ತೋಟಿಗೇರ ಅವರಿಗೆ ಈ ದಾಖಲೆಗಳನ್ನು ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಅವರಿಗೆ ಹಸ್ತಾಂತರಿಸಲು ನೀಡಿದ್ದಾರೆ.

ಈ ದಾಖಲೆಗಳು ಮುಂಚೆ ನೀಡಿದ ಕರ್ನಾಟಕ ಏಕೀಕರಣ ಪರಿಷತ್ತಿನ ಸಭೆಯ ಕರಪತ್ರ ಹಾಗೂ ಛಾಯಾ ಚಿತ್ರಗಳಿಗೆ ಪೂರಕವಾಗಲಿವೆ. ಈ ದಾಖಲೆಗಳು ಅಂಕಿ ಸಂಖ್ಯೆಗಳ ಸಮೆತ ಅಚ್ಚ ಕನ್ನಡದಲ್ಲಿವೆ. ಸದರಿ ಆಹ್ವಾನ ಪತ್ರ ಹಾಗೂ ಔತಣದೋಲೆಗಳು ನಿಪ್ಪಾಣಿಯ ಶ್ರೀ ವರ್ಧಮಾನ ಪ್ರೆಸ್‌ನಲ್ಲಿ ಮುದ್ರಣಗೊಂಡಿದ್ದವು.ಕರ್ನಾಟಕ ಏಕೀಕರಣ ಚಳುವಳಿ ಬೆಳಗಾವಿ ಜನರ ಪಾತ್ರ , ಮತ್ತಷ್ಟು ಸಾಕ್ಷ್ಯ ಲಭ್ಯ

ಆಹ್ವಾನ ಪತ್ರದಲ್ಲೇನಿದೆ?

ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಬೆಳಗಾವಿ ಜಿಲ್ಲೆಯ ಕರ್ನಾಟಕ ಏಕೀಕರಣ ಪರಿಷತ್ತಿನ ಸಭೆಯನ್ನು ಜನೇವರಿ 10, 1956ರಂದು ಮಧ್ಯಾಹ್ನ 3 ಗಂಟೆಗೆ ಕರೆಯಲಾಗಿದೆ. ಸಭೆಗೆ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಅಂಬಲಿ ಚನಬಸಪ್ಪ, ಕರ್ನಾಟಕದ ಮುಖಂಡರು, ಲೋಕಸಭೆಯ ಆಗಿನ ಸದಸ್ಯ ಎಸ್.ನಿಜಲಿಂಗಪ್ಪ ಪರಿಷತ್ ಸಭೆ ಉದ್ಘಾಟಿಸಿದ್ದಾರೆ.

ಅಲ್ಲದೇ ಪರಿಷತ್ತಿಗೆ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಮುಂದಾಳುಗಳು, ಕಾರ್ಯಕರ್ತರು ಆಗಮಿಸತ್ತಾರೆ. ಆದ್ದರಿಂದ ಸಭೆಗೆ ಆಹ್ವಾನಿಸಲು ಸ್ವಾಗತ ಅಧ್ಯಕ್ಷ ಪಿ.ಎಚ್.ಗೋಂಜಾಳ ಹಾಗೂ ಕಾರ್ಯಾಧ್ಯಕ್ಷ ಎಸ್.ಡಿ.ಕೋಠಾವಳೆ ಕೊರಿರುತ್ತಾರೆ.

ಔತಣದೋಲೆಯಲ್ಲೇನಿದೆ?

ಬೆಳಗಾವಿ ಜಿಲ್ಲೆಯ ಕರ್ನಾಟಕ ಏಕೀಕರಣ ಪರಿಷತ್ತು, ಅಂಕಲಿ ಸ್ವಾಗತ ಸಮಿತಿಯ ಸದಸ್ಯರುಗಳಾದ ಅಂಕಲಿ ಸ್ವಾತಂತ್ರ್ಯ ಸೇನಾನಿ ಬಸಪ್ರಭು ಕೋರೆ (ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ತಂದೆ), ಎಕ್ಸಂಬಾದ ಚನಬಸಪ್ಪ ಕರಾಳೆ, ಚಿಕ್ಕೋಡಿಯ ಸಹಕಾರ ಮಹರ್ಷಿ ಶಾಂತಪ್ಪ ಮಿರ್ಜಿ, ಮಾಂಜರಿಯ ಸ್ವಾತಂತ್ರ್ಯ ಸೇನಾನಿ ಅಪ್ಪಾಸಾಹೇಬ ಪಾಟೀಲ, ಚಿಕ್ಕೋಡಿಯ ಪಾರ್ವತಿದೇವಿ ಹುಂಬರವಾಡಿ ಹಾಗೂ ಬೆಳಗಾವಿ ವಿಭಾಗದ ಹಿರಿಯ ಮುಖಂಡರು ಆಹ್ವಾನ ಕೋರಿದ್ದಾರೆ.

ಈಗಾಗಲೇ ಸರ್ವೊಚ್ಚನ್ಯಾಯಲಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ಹಂಚಿಕೆ ವಿವಾದ ಚಾಲ್ತಿಯಲ್ಲಿದೆ. ಬೆಳಗಾವಿ ಕರ್ನಾಟಕ ಏಕೀಕರಣ ಹೋರಾಟದ ಪ್ರಮುಖ ಸ್ಥಳವಾಗಿತ್ತು. ಮುಂಬೈ-ಕರ್ನಾಟಕ ಬೌಗೋಳಿಕ ಪ್ರದೇಶವಾದ ಈ ಭಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲು ಅಸಾಧ್ಯ ಎಂಬ ಕರ್ನಾಟಕದ ಪರ ವಾದಕ್ಕೆ ಈ ದಾಖಲೆಗಳು ಪೂರಕವಾಗಲಿವೆ.

ಗಡಿ ಭಾಗವಾದ ಬೆಳಗಾವಿಯು ಕೂಡ ಏಕೀಕೃತ ಕರ್ನಾಟಕ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ, ಕನ್ನಡ-ನಾಡು-ನುಡಿ-ಗಡಿ ಕಟ್ಟಲು ಅವಿರತವಾಗಿ ಶ್ರಮಿಸಿದ್ದರು ಎನ್ನುವ ಅಂಶಗಳನ್ನು ಈ ದಾಖಲೆಗಳು ಸಾಕ್ಷಿಕರಿಸುತ್ತವೆ ಎಂದು ಗಡಿತಜ್ಞ ಡಾ. ರವೀಂದ್ರ ತೋಟಿಗೇರ ಅಭಿಪ್ರಾಯ ಪಟ್ಟಿದ್ದಾರೆ. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button