Kannada NewsKarnataka News

ಆಸ್ಟ್ರೇಲಿಯಾದಲ್ಲಿ ಗುರು-ವಿರಕ್ತರ ಧರ್ಮೋಪದೇಶ

 ಆಸ್ಟ್ರೇಲಿಯಾ -ಮಲ್ಬರ್ನ :  ವೀರಶೈವ ಲಿಂಗಾಯತ ಧರ್ಮಕ್ಕೆ ಜಗದ್ಗುರು ರೇಣುಕಾದಿ ಪಂಚಾಚಾರ್ಯರು, ಬಸವಾದಿ ಪ್ರಮಥರು ಎರಡು ಕಣ್ಣುಗಳಿದ್ದಂತೆ. ಇವರು ಹಾಕಿಕೊಟ್ಟ ಮಾರ್ಗ ಅದು ಅದ್ಭುತವಾದ ಮಾರ್ಗ. ಈ ಧರ್ಮದಲ್ಲಿ ತತ್ವಗಳ ತ್ರಿಪುಟಿವಿದೆ. ಈ ತತ್ವಗಳ ತ್ರಿಪುಟಿಯನ್ನು ಅರಿತು ಆಚರಿಸಿದರೆ ಜನ್ಮ ಸಾರ್ಥಕವಾಗುತ್ತದೆ ಎಂದು ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಮಲ್ಬರ್ನ ಬಸವ ಸಮಿತಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಅಷ್ಟಾವರ್ಣಗಳ ಅರಿವನ್ನು  ಶ್ರೀಗಳು ತಮ್ಮ ಉಪದೇಶದಲ್ಲಿ ನೀಡಿದರು.
ಮಂಡ್ಯ ಜಿಲ್ಲೆಯ ಬೇಬಿ ಮಠ,  ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಡಾ. ತ್ರಿನೇತ್ರ  ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಷಟಸ್ಥಲದ ಸಿದ್ಧಾಂತ ಅದ್ಭುತವಾದ ಸಿದ್ಧಾಂತ. ಈ ಸಿದ್ಧಾಂತವನ್ನು ಮಕ್ಕಳಿಗೆ ತಿಳಿಸಿ ನಮ್ಮ ಧರ್ಮವನ್ನು ಉಳಿಸುವ ಅವಶ್ಯಕತೆ ತುಂಬಾ ಇದೆ. ಇಷ್ಟಲಿಂಗ ಪೂಜೆ ಮತ್ತು  ಪ್ರಣವ ಪಂಚಾಕ್ಷರಿ ಮಹಾಮಂತ್ರದ ಜಪವನ್ನು  ಮಾಡಿದಾಗ ಖಂಡಿತ ಏಕಾಗ್ರತೆ ಯಾಗುತ್ತದೆ ಎಂದರು.
 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗಾ ಕ್ಷೇತ್ರದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮದಲ್ಲಿ ಪಂಚಾಚಾರಗಳು ವಿಶೇಷವಾಗಿ ರುವಂತಹ ಅನುಕರಣೆ ಮಾಡುವ ಸಿದ್ಧಾಂತವನ್ನು ಒಳಗೊಂಡಿದೆ.
ಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯದಲ್ಲಿ ಈ ಧರ್ಮದ ಬಗ್ಗೆ ಅಪಾರವಾದ ಜ್ಞಾನ ಭಂಡಾರವಿದೆ. ಪ್ರತಿಯೊಬ್ಬ ವೀರಶೈವ-ಲಿಂಗಾಯತನು ಸಿದ್ಧಾಂತಶಿಖಾಮಣಿಯನ್ನು ಮತ್ತು ವಚನ ಶಾಸ್ತ್ರವನ್ನು ಮನೆಯಲ್ಲಿ ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನವನ್ನು ಎಲ್ಲರೂ ಮಾಡಲಿ ಎಂದರು.
 ಇದೇ ಸಂದರ್ಭದಲ್ಲಿ ಗಂಗಾಧರ ಬೇವಿನಕೊಪ್ಪ ಅವರು ಎಲ್ಲಾ ಶ್ರೀಗಳನ್ನು ಸ್ವಾಗತಿಸಿದರು.  ಬಸವ ಸಮಿತಿಯ ಅಧ್ಯಕ್ಷೆ ಆಸ್ಟ್ರೇಲಿಯಾದ ಶ್ರೀಚಿಂತನ ಧರ್ಮರೆಡ್ಡಿಯವರು ಮಾತನಾಡಿ, ಭಾರತದಿಂದ ಇವತ್ತು ಇಡೀ ಗುರು ವಿರಕ್ತ ಪರಂಪರೆ ನಮ್ಮ ದೇಶಕ್ಕೆ ಬಂದಿರುವುದು ಅಭಿಮಾನದ ಸಂಗತಿ. ನಾವು ಇಂದು ಗುರು-ಲಿಂಗ-ಜಂಗಮರ ರೂಪದಲ್ಲಿ ಬಂದಿರುವ ಶ್ರೀಗಳ ಆಶೀರ್ವಚನವನ್ನು ಕೇಳಿದ್ದೇವೆ.
ನಾವೆಲ್ಲರೂ ಕೂಡ ನಿತ್ಯ ಲಿಂಗಪೂಜೆ ರುದ್ರಾಕ್ಷಿ ಧಾರಣೆ, ಪ್ರಣವ ಪಂಚಾಕ್ಷರಿ ಮಹಾಮಂತ್ರವನ್ನು ಜಪಿಸುವುದರೊಂದಿಗೆ ನಮ್ಮ ಮಕ್ಕಳಿಗೂ ಕೂಡ ಕಲಿಸುತ್ತೇವೆ.  ನಾವೆಲ್ಲರೂ ಒಂದಾಗಿದ್ದೇವೆ. ನಮಗೆ ಎಲ್ಲಾ ಗುರುಗಳು ಮಾರ್ಗದರ್ಶನ ಮಾಡುತ್ತಾ ನಮ್ಮ ಮುಂದಿನ ಪೀಳಿಗೆಗೆ ಇಂಗ್ಲಿಷ್ನಲ್ಲಿ ಸಿದ್ಧಾಂತ ಶಿಖಾಮಣಿಯನ್ನು ಮತ್ತು ವಚನ ಶಾಸ್ತ್ರವನ್ನು ತಿಳಿಸುವ ಪ್ರಯತ್ನವನ್ನು ಮಾಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ದೇಶದ ಅನೇಕ ಭಾಗದಿಂದ ಬಂದ ಜನರು ಮೂರು ಶ್ರೀಗಳ ಆಶೀರ್ವಚನವನ್ನು ಕೇಳಿದರು. ಎಲ್ಲಾ ಮಕ್ಕಳಿಗೆ ವಿಶೇಷವಾಗಿರುವ ಉಪದೇಶವನ್ನು ಪೂಜ್ಯತ್ರಯರು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button