

ಅಯ್ಯೋಧ್ಯೆಯಲ್ಲಿದ್ದ ವಿವಾದಿತ ಕಟ್ಟಡದ ಬದಲಾಗಿ ರಾಮಮಂದಿರ ನಿರ್ಮಾಣಕ್ಕೆ ಛತ್ರಪತಿ ಶಿವಾಜಿ ಸೇರಿದಂತೆ ಅನೇಕ ರಾಜ ಮಹಾರಾಜರು ಯುದ್ಧ ಮಾಡಿದ್ದಾರೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಕೂಡಾ ಎರಡು ಯುದ್ಧಗಳು ಜರುಗಿವೆ. ಲಕ್ಷಾಂತರ ರಾಮಭಕ್ತರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಸ್ವಾತಂತ್ರ್ಯದ ನಂತರ ಕಾನೂನು ಹೋರಾಟ ಜರುಗ ತೊಡಗಿತು. 1988ರಲ್ಲಿ ಜರುಗಿದ ಶ್ರೀರಾಮ ಕರಸೇವೆಗೆ ಮುಲಾಯಂಸಿಂಗ್ ಯಾದವ ಸರ್ಕಾರ ಸಾವಿರಾರು ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿ ಸರಯು ನದಿಯಲ್ಲಿ ರಕ್ತದ ಕೋಡಿಯನ್ನೆ ಹರಿಸಿದ್ದಾರೆ. ಸಾಧು ಸಂತರ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್ ಕೈಗೊಂಡ ಅನೇಕ ಹೋರಾಟಗಳ ಫಲವಾಗಿ ಇಂದು ಆಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರು.
ವಿಎಚ್‍ಪಿ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಜನೆವರಿ 15 ರಿಂದ ಫೆಬ್ರುವರಿ 5ರವರೆಗೆ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹ ಅಭಿಯಾನ ಜರುಗಲಿದೆ. ಈ ನಿಮಿತ್ತ ಪೂರ್ವ ಸಿದ್ಧತೆ ರಾಷ್ಟ್ರಾದ್ಯಂತ ಭರದಿಂದ ಸಾಗಿದೆ. ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಕೂಡಾ ಈಗಾಗಲೇ 500 ಕ್ಕೂ ಹೆಚ್ಚು ಬೈಠಕ್‍ಗಳು ಜರುಗಿವೆ. ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮುಂಬರುವ ಜನೇವರಿ 17ರಂದು ಬೆಳಗಾವಿ ನಗರದಲ್ಲಿ ನಿಧಿ ಸಂಗ್ರಹ ಅಭಿಯಾನ ಮಾಡಲಿದ್ದಾರೆ. ಬೆಳಗಾವಿಯ ಗ್ರಾಮಾಂತರ ಪ್ರದೇಶದಲ್ಲಿ ಜನೇವರಿ 24 ಮತ್ತು 31ರಂದು ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹ ಅಭಿಯಾನ ಜರುಗಲಿದೆ. ಬೆಳಗಾವಿ ನಗರದ ಪ್ರತಿ ಮನೆ ಮನೆಗೂ ತೆರಳಿ ಪ್ರತಿಯೊಬ್ಬರಿಂದಲೂ ನಿಧಿಯನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ನಾಗನಾಥ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ವಿಎಚ್‍ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ನಗರ ಅಧ್ಯಕ್ಷ ಡಾ.ಬಾಗೋಜಿ, ನಗರ ಕಾರ್ಯದರ್ಶಿ ಹೇಮಂತ ಹವಳ, ಜಿಲ್ಲಾ ಸಂಚಾಲಕ ಭಾವುಕಣ್ಣಾ ಲೋಹಾರ್ ಮತ್ತು ನಗರ ಸಂಯೋಜಕ ಆದಿನಾಥ ಗಾವಡೆ, ಕ್ರೀಡಾ ಭಾರತಿ ಪ್ರಾಂತ ಸಂಚಾಲಕ ಅಶೋಕ ಶಿಂತ್ರೆ ಸೇರಿದಂತೆ ವಿಎಚ್‍ಪಿಯ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.
ಬಸವರಾಜ ಹಳಿಂಗಳಿ ಪ್ರಾರ್ಥಿಸಿದರು. ವಿಭಾಗ ಸಹ ಪ್ರಮುಖ ಅಚ್ಯುತ್ ಕುಲಕರ್ಣಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ