ವೀರಯೋಧ ಗಣಪತಿ ಶಿವಣ್ಣ ಹೊನ್ನಕೋರೆ ಅವರ ಮೂರ್ತಿ ಸ್ಥಾಪನೆ
ಪ್ರಗತಿವಾಹಿನಿ ಸುದ್ದಿ, ಇಂಡಿ –ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದ ವೀರಯೋಧ ಗಣಪತಿ ಶಿವಣ್ಣ ಹೊನ್ನಕೋರೆ ಅವರ ಮೂರ್ತಿ ಸ್ಥಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ವೀರಯೋಧ ಗಣಪತಿ ಹೊನ್ನಕೋರೆ ದೇಶಸೇವೆಗೆ ಎಂದು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಹೋದವರಿಗೆ ಗುಂಡು ತಗುಲಿ ಪ್ರಾಣ ಬಿಟ್ಟಿದ್ದರು. ಇಂಡಿಯಲ್ಲಿ ಇಂದು ಅವರ ಮೂರ್ತಿ ಸ್ಥಾಪನೆ ಮಾಡಲಾಯಿತು. ಮೂರ್ತಿಯ ಭವ್ಯ ಮೆರಣಿಗೆ ಶಾಂತೇಶ್ವರ ಮಂಗಲ ಕಾರ್ಯಾಲಯದಿಂದ ಪ್ರಾರಂಭವಾಯಿತು. ಸುಮಾರು 200ಕ್ಕಿಂತ ಹೆಚ್ಚು ಕುಂಭ ಹೊತ್ತ ಮಹಿಳೆಯರು ಭಾಗವಹಿಸಿದ್ದರು.
ಪಟ್ಟಣದ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಹಾಗೂ ಇಂಗಳಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಮೂರ್ತಿ ಸ್ಥಾಪನೆ ಮಾಡಲಾಯಿತು. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಗಣಪತಿ ಅವರ ತಾಯಿ ಸರಸ್ವತಿ, ತಂದೆ ಶಿವಣ್ಣ ಭಾಗವಹಿಸಿ, ಪುತ್ರನನ್ನು ನೆನೆದು ಕಣ್ಣೀರಿಟ್ಟರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಯಶವಂತರಾಯಗೌಡ ಪಾಟೀಲ್, ಬಿಜೆಪಿಯ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಜೆಡಿಎಸ್ ನ ಅಧ್ಯಕ್ಷ ಬಿ. ಡಿ.ಪಾಟೀಲ, ಜಿಲ್ಲಾ ಪಂಚಾಯತ್ ಸದಸ್ಯ ಹಣಮಂತ ಖಂಡೇಕರ, ಪುರಸಭೆ ಸದಸ್ಯ ಅನಿಲಗೌಡ ಬಿರಾದಾರ ಹಾಗೂ ಇಂಗಳಗಿ ಗ್ರಾಮದ ಪ್ರಭು ಹೊಸಮನಿ, ಸುಭಾಸ ತೋರತ್, ದಾದಾಸಾಹೇಬ್ ಪವಾರ, ಅಣ್ಣಾರಾಯ ಆಹಿರಸಂಘ, ಮಠಾಧೀಶರು, ಮಾಜಿ ಯೋಧರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ