ಪ್ರಗತಿ ವಾಹಿನಿ ಸುದ್ದಿ, ನವದೆಹಲಿ:
2017ರ ನವೆಂಬರ್ ತಿಂಗಳಿಂದ ಈವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 36 ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇದರಲ್ಲಿ ಇತ್ತೀಚಿನ ಜಿ 20 ಶೃಂಗ ಸಭೆಗೆ ಇಂಡೋನೇಷ್ಯಾಗೆ ತೆರಳಿದ್ದು, ಜಪಾನ್ ಪ್ರವಾಸವೂ ಸೇರಿದೆ.
ಮೋದಿ ಅವರ ಈ 36 ವಿದೇಶ ಪ್ರವಾಸಗಳ ಪೈಕಿ 29 ಪ್ರವಾಸಗಳ ಖರ್ಚು ವೆಚ್ಚದ ವಿವರ ಲಭ್ಯವಿದೆ. 29 ವಿದೇಶ ಒಟ್ಟು 239.04 ಕೋಟಿ ರೂ. ವೆಚ್ಚವಾಗಿದೆ. ಉಳಿದ 7 ವಿದೇಶ ಪ್ರವಾಸಗಳ ಖರ್ಚು ವೆಚ್ಚದ ಸ್ಪಷ್ಟ ಮಾಹಿತಿ ಲಭ್ಯವಿಲ್ಲ ಎಂದು ರಾಜ್ಯಸಭೆಗೆ ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.
ಇದರಲ್ಲಿ 2019ರಲ್ಲಿ ಯುಎಸ್ ಪ್ರವಾಸಕ್ಕೆ 23.27 ಕೋಟಿ ರೂ. ಹಾಗೂ ಬ್ರೆಜಿಲ್ ಪ್ರವಾಸಕ್ಕೆ 20.01 ಕೋಟಿ ರೂ. ವೆಚ್ಚ ಸೇರಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದಿಂದ ಭಾರತ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಗಟ್ಟಿಗೊಳಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
*ಅಪಹರಣ ಮಾಡಿ ಹಣ ಸುಲಿಗೆ ಮಾಡಿದ್ದ 7 ಜನರ ಬಂಧನ*
https://pragati.taskdun.com/arrest-of-7-people-who-kidnapped-and-extorted-money/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ