Belagavi NewsBelgaum NewsKannada NewsKarnataka NewsNationalPolitics
*14 ಕುರಿ ಮರಿಗಳನ್ನು ಬಲಿಪಡೆದ ತೋಳ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ತುದಿಮಾಳ ತೋಟದ ವಲಯದಲ್ಲಿ ರಾತ್ರಿ ಶಂಕರ್ ಯಲ್ಲಪ್ಪ ನಾಯಕ ಹಾಗೂ ದುಂಡಪ್ಪ ಬಾಬು ನಾಯಕ ಅವರಿಗೆ ಸೇರಿದ 14 ಕುರಿ ಮರಿಗಳನ್ನು ತೋಳ ಬಲಿ ಪಡದಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಮೇಶ್ ಕಮತಿ, ಪಶು ವೈದ್ಯಾಧಿಕಾರಿ ಡಾ. ಮಲ್ಲಪ್ಪ ತಳವಾರ, ಕುರಿಗಾರರ ಸಂಘದ ಅಧ್ಯಕ್ಷ ಶಂಕರ್ ಹೆಗಡೆ, ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹುಕ್ಕೇರಿ ತಾಲೂಕ ಅರಣ್ಯ ಇಲಾಖೆ ಅಧಿಕಾರಿ ಬಿ ಎಲ್ ಸನದಿ 14 ಕುರಿ ಮರಿಗಳನ್ನು ತೋಳ ಬಲಿ ಪಡದಿದೆ ಕುರಿಗಾರರಾದ ಶಂಕರ್ ನಾಯಕ್ ಹಾಗೂ ದುಂಡಪ್ಪ ನಾಯಕ್ ಅವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ ಎಂದರು.




