Belagavi NewsBelgaum News

*ಅಂಚೆ ಚೀಟಿ ಪ್ರದರ್ಶನದಿಂದ ಇತಿಹಾಸ ನೆನಪಿಸುವ ಕೆಲಸ: ಡಾ. ಅಲ್ಲಮಪ್ರಭು ಶ್ರೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ ಇಕ್ಕು ಪೆಕ್ಸ್ 2025 ನ ಕೊನೆಯ ದಿನ ಬೆಳಗಿನ ಅಧಿವೇಶನದಲ್ಲಿ ಬೆಳಗಾವಿಯ ಇತಿಹಾಸ ಮತ್ತು ಪರಂಪರೆಯ ವಿಷಯದ ಮೇಲೆ ಆಯೋಜಿಸಲಾದ ವಿಶೇಷ ಲಕೋಟೆ ಬಿಡುಗಡೆ ಸಮಾರಂಭ ನಡೆಯಿತು. ದಿವ್ಯ ಸಾನಿದ್ಯ ವಹಿಸಿ ಆಶೀರ್ವಾಚನ ನೀಡಿದ ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಎಸ್ ಈ ಬಾಳೆಕುಂದ್ರಿಯವರು ಎರಡನೇ ವಿಶ್ವೇಶ್ವರಯ್ಯ ಎಂದೇ ಪ್ರಖ್ಯಾತರಾದ ಸರಳ ಸಜ್ಜನಿಕೆಯ ಅಭಿಯಂತರರು ಎಂದು ನೆನಪು ಮಾಡುತ್ತಾ ಇಂತಹ ಐತಿಹಾಸಿಕ ಮಹತ್ವದ ಸಾಧಕರನ್ನು, ಸಾಧನೆಗಳನ್ನು ನೆನೆಪಿಸುವ ಕೆಲಸ ಮಾಡಿದ ಅಂಚೆ ಇಲಾಖೆಯ ಕಾರ್ಯ ಅಭಿನಂದನಿಯ ಎಂದರು.

ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ರಾಜ್ಯಸಭಾ ಸಂಸದ ಈರಣ್ಣ ಕಾಡಡಿ ಅಂಚೆ ಇಲಾಖೆಯು ಇತಿಹಾಸ ಮೆಲುಕು ಹಾಕಲು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಇದೊಂದು ಪ್ರೇರಣಾದಯಕ ಕಾರ್ಯಕ್ರಮ ಎಂದು ಕೊಂಡಾಡಿದರು.

ಬೆಳಗಾವಿ ಜಿಲ್ಲಾಧಿಕಾರಿ ಮೋಹಮ್ಮದ್ ರೋಷನ್ ಅವರು ಮಾತನಾಡಿ ಅತಿ ಕಡಿಮೆ ಸಮಯದಲ್ಲಿ ಕೇವಲ 18 ದಿನಗಳ ಅವಧಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮರ ಎರಡುನೂರು ವರ್ಷಗಳ ಕುರಿತು ಅಂಚೆ ಚೀಟಿ ಯನ್ನು ಬಿಡುಗಡೆ ಗೊಳಿಸಿ ಅಸಾಧ್ಯವನ್ನು ಸಾಧ್ಯ ವಾಗಿಸಿದ ಕೀರ್ತಿ ಬೆಳಗಾವಿ ಅಂಚೆ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು. ಫಿಲಾಟೆಆಸ್ಟ್‌ಗಳು ಇತಿಹಾಸ ಸಂರಕ್ಷಕರು ಎಂದು ಅಭಿಪ್ರಾಯ ಪಟ್ಟರು.

ಕರ್ನಲ್ ಚಂದ್ರ ನೀಲ ರಮಾನಾಥ್ ಕರ್ ನಮ್ಮ ಅಂಚೆ ಅಣ್ಣಾ ದೇಶದ ಪ್ರತಿಯೊಂದು ಮನೆಯ ಅತ್ಯಂತ ಅವಿಭಾಜ್ಯ ಸಂಬಂಧ ಹೊಂದಿದ್ದಾನೆ ಎಂದು ನುಡಿದರು.

ಮಾತನಾಡಿ ನಂತ ಮಹಾರಾಜರ ಆಧ್ಯಾತ್ಮಿಕ ಬದುಕಿನ ಪರಿಚಯ ಮಾಡಿಕೊಟ್ಟರು ಮತ್ತು ಅಂಚೆ ಇಲಾಖೆಯ ಪ್ರಾಮಾಣಿಕ ಜನ ಸೇವೆಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಬಾಳೆಕುಂದ್ರೀಯ ಶ್ರೀ ದತ್ತ ಸಂಸ್ಥಾನದ ಉಪಾಧ್ಯಕ್ಷರಾದ ಅಪ್ಪಸಾಹೇಬ್ ದಡ್ಡಿಕರ್, ಬೆಳಗಾವಿ ಅಂಚೆ ಅಧೀಕ್ಷಕರಾದ ವಿಜಯ ವಾದೋನಿ, ಗೋಕಾಕ್ ವಿಭಾಗದ ಅಂಚೆ ಅಧಿಕ್ಷಕರಾದ ರಮೇಶ್ ಕಮತೆ, ಚಿಕ್ಕೋಡಿ ಅಂಚೆ ಅಧೀಕ್ಷಕರಾದ ವೆಂಕಟೇಶ್ ಬದಾಮಿ ಉಪಸ್ಥಿತರಿದ್ದರು. ಅಂಚೆ ನಿರೀಕ್ಷಕ ಪ್ರವೀಣ್ ಶೀಲವಂತರ ಸ್ವಾಗತ ಕೋರಿದರು. ಶ್ರೀಮತಿ ಕೃತಿ ನಿರೂಪಿಸಿದರು. ರಾಮದುರ್ಗ ಅಂಚೆ ಪಾಲಕರಾದ ದವಲ್ ಅಣ್ಣಿಗೇರಿ ರವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಪಂತ ಮಹಾರಾಜ್ ಶ್ರೀ ಕ್ಷೇತ್ರ ಪಂತ ಬಾಳೇ ಕುಂದ್ರಿ ಕುರಿತು, ಉತ್ತರ ಕರ್ನಾಟಕದ ಭಗೀರಥ ಎರ್ ಜಿ ಬಾಳೆಕುಂದ್ರಿ ರವರ ಸ್ಮರಣರ್ಥ ಮತ್ತು ಎಷ್ಯದ ಮೊದಲ ಹೈಡೋ ಎಲೆಕ್ಟಿಕ್ ಪವರ್ ಹೌಸ್ ಗೋಕಾಕ್ ಜಲಪಾತ ನೆನೆಪಿಗಾಗಿ ವಿಶೇಷ ಅಂಚೆ ಲಕೋಟೆಗಳನ್ನು ಅಂಚೆ ಇಲಾಖೆಯಿಂದ ಲೋಕಾರ್ಪಣೆ ಗೊಳಿಸಲಾಯಿತು ಮತ್ತು ಬೆಳಗಾವಿ ಪರಂಪರೆ ಯನ್ನು ಬಿಂಬಿಸುವ ಚಿತ್ರಯುಕ್ತ ಅಂಚೆ ಕಾರ್ಡ್ ಯನ್ನು ಸಹ ಗಣ್ಯ ಮಾನ್ಯರು ಬಿಡುಗಡೆ ಗೊಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button