Belagavi NewsBelgaum NewsKannada NewsKarnataka NewsPolitics

ಮೂರು ತಿಂಗಳೊಳಗೆ ಕೆರೆ ತುಂಬುವ ಯೋಜನೆ ಕಾಮಗಾರಿ ಮುಕ್ತಾಯ: ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೂರು ತಿಂಗಳೊಳಗೆ ಕೆರೆ ತುಂಬುವ ಯೋಜನೆ ಕಾಮಗಾರಿ ಮುಕ್ತಾಯಗೊಳಿಸಿ ಜನರಿಗೆ ನೀರು ಒದಗಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು. 

ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆರೆತುಂಬುವ ಯೋಜನೆ ಕಾಮಗಾರಿಗೆ ಭೇಟಿ ನೀಡಿ ಮಾತನಾಡಿದ ಅವರು, 2017 ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಾಲೂಕಿನ 17 ಗ್ರಾಮಗಳ 39 ಕೆರೆಗಳನ್ನು ತುಂಬುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದು ಚಾಲನೆ ನೀಡಿದ್ದ ಕಾಮಗಾರಿ ಕುಂಟುತ್ತ ಸಾಗಿ ಕೆರೆಗಳಿಗೆ ಪೈಪ್‌ಲೈನ್ ಜೋಡಿಸುವ ಕಾಮಗಾರಿ ಮುಕ್ತಾಯಗೊಂಡಿದ್ದರೂ, ಮುಖ್ಯವಾಗಿ ನದಿ ನೀರನ್ನು ಪಂಪ್ ಮಾಡಿ, ಕೆರೆಗಳಿಗೆ ನೀರು ಹರಿಸಲು ಜಾಕ್ ವೇಲ್ ನಿರ್ಮಾಣ ಕಾಮಗಾರಿ ವಿಳಂಭವಾಗಿತ್ತು. ಇದು ನನ್ನ ಗಮನಕ್ಕೆ ಬಂದ ನಂತರ  ಈಗ ಕಾಮಗಾರಿ ಭರದಿಂದ ಸಾಗಿದೆ. ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದ್ದು ಮಷಿನರಿ ಕೆಲಸಗಳು ಬಾಕಿ ಇವೆ ಎಂದರು.

ಹಳೆದಿಗ್ಗೇವಾಡಿಯಲ್ಲಿ ಕೃಷ್ಣಾನದಿಗೆ ಬ್ರಿಡ್ಜ್ ಕಂ ಬಾಂದಾರ ಕಾಮಗಾರಿಗೆ ವಿಳಂಭದ ಕುರಿತು ಗಮನಕ್ಕೆ ಬಂದಿದೆ. ಸೂಕ್ತ ಕ್ರಮ‌ಕೈಗೊಂಡು ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು ಎಂದರು. 

ಈ ಸಂದರ್ಭದಲ್ಲಿ ಶಾಮ ಘಾಟಗೆ, ಅರ್ಜುನ ನಾಯಿಕವಾಡಿ, ಎನ್ ಎ ಮಗದುಮ, ಬಾವುಸಾಹೇಬ ಪಾಟೀಲ, ಅಣ್ಣಪ್ಪ ಭುವಿ, ನಾಮದೇವ ಕಾಂಬಳೆ, ದಿಲೀಪ ಜಮಾದರ, ಮುಜೀಬ ಸಯ್ಯದ, ನಿರ್ಮಲಾ ಪಾಟೀಲ, ರಣಜೀತ ಶಿರಸೇಠ, ಕುಮಾರ ಹಾರೂಗೇರಿ, ಅನಂತಕುಮಾರ ಬ್ಯಾಕೂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button