Latest

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಾತಿ ಬೇದ ಇಲ್ಲ, ಕಾಂಗ್ರೆಸ್ ಪಕ್ಷ ತ್ಯಾಗದ ಪಕ್ಷವಾಗಿದೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಗದಗ – ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಾತಿ ಬೇದ ಇಲ್ಲ. ಕಾಂಗ್ರೆಸ್ ಪಕ್ಷ ತ್ಯಾಗದ ಪಕ್ಷವಾಗಿದೆ  ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ  ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗದಗ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಪಿಸಿಸಿಯ ಮಹತ್ವಾಕಾಂಕ್ಷೆಯ ಸ್ತ್ರೀ ಶಕ್ತಿ ಸಂಘಟನಾ ಸಮಿತಿಯ ‘ ನಾ ನಾಯಕಿ ‘ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ನಾಯಕಿಯರು. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಯಾವಾಗಲೂ ಮಹಿಳೆಯರ ಪರವಾದ ಚಿಂತನೆ ಮಾಡಿದೆ. ಮಹಿಳೆರಿಗಾಗಿ ಹತ್ತು ಹಲವು ಕಾರ್ಯಕ್ರಮ ಜಾರಿಗೆ ತರಲಾಗಿದೆ. ಮಹಿಳೆಯರು ಸ್ವಾವಲಂಬನೆ ಜೀವನ ನಡೆಸಲು ಮುಂದಾಗಬೇಕು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಾತಿ ಬೇದ ಇಲ್ಲ. ಕಾಂಗ್ರೆಸ್ ಪಕ್ಷ ತ್ಯಾಗದ ಪಕ್ಷವಾಗಿದೆ ಎಂದರು.

ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಬಲವರ್ಧನೆಗೊಳಿಸುವ ಸಲುವಾಗಿ ಸುಧೀರ್ಘವಾಗಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ಮಹಿಳೆಯರಿಗಾಗಿ ವಿಶೇಷವಾದ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಸಬಲೀಕರಕ್ಕೆ ಒತ್ತು ನೀಡಿತ್ತು. ಕಾಂಗ್ರೆಸ್ ಪ್ರಮುಖ ಯೋಜನೆಗಳಾದ ಅನ್ನಭಾಗ್ಯದ ಮೂಲಕ ಮಹಿಳೆಯರಿಗೆ ನೆರವಾಗಿದೆ, ತನ್ನ ಅಧಿಕಾರದ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರ ಏಳಿಗೆಗಾಗಿ ಶ್ರಮಿಸಿದೆ ಎಂದರು.
ಈಗಾಗಲೇ 2023ರ ಚುನಾವಣೆಯ ಪ್ರಣಾಳಿಕೆಯಲ್ಲಿ ಮಹಿಳೆಯರ ಬಲವರ್ಧನೆಗಾಗಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದ್ದು, ಮಹಿಳೆಯರಿಗೆ ಹೆಚ್ಚಿನ ಪ್ರಾಧ್ಯಾನತೆಯನ್ನು ನೀಡಲಾಗುವುದು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಆಗಿನ ಕಾಲದಲ್ಲಿ ಲಕ್ಷಾಂತರ ಮಹಿಳೆಯರು ಪಾಲ್ಗೊಂಡು ತಮ್ಮ ಪ್ರಾಬಲ್ಯತೆಯನ್ನು ಮೆರೆದಿದ್ದಾರೆ. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಏನೆಲ್ಲ ಸಾಧನೆಗಳನ್ನು ಮಾಡಬಹುದೆಂದು ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿಯ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಮದರ್‌ ತೆರೇಸಾ ಮುಂತಾದ ಮಹಿಳೆಯರು ತೋರಿಸಿದ್ದಾರೆ ಎಂದು ಹೆಬ್ಬಾಳಕರ್ ಹೇಳಿದರು.
ಒಬ್ಬ ಮಹಿಳೆ ಹತ್ತಲ್ಲ ನೂರು ಮತಗಳಿಗೆ ಸಮವಾಗಿದ್ದು, ಮಹಿಳೆಯರ ಅನಿಸಿಕೆಗಳ ಮೇಲೆ ಚುನಾವಣೆಗಳ ಫಲಿತಾಂಶಗಳು ನಿರ್ಧಾರವಾಗುತ್ತವೆ. ನಾವೆಲ್ಲರೂ ಒಗ್ಗಟ್ಟಾಗಿ ಈ ರಾಜ್ಯದ ಹಾಗೂ ದೇಶದ ಅಭಿವೃದ್ಧಿಗಾಗಿ ಪಣವನ್ನು ತೊಡೋಣ, ಸ್ತ್ರೀ ಶಕ್ತಿ ಸಂಘಟನೆಯನ್ನು ಬೃಹದಾಕಾರದಲ್ಲಿ ಬೆಳೆಸಿ, ದೇಶದ ಸಮಗ್ರತೆಗಾಗಿ ಕಾರಣರಾಗೋಣ ಎಂದು ಕರೆ ನೀಡಿದರು.

ಎಲ್ಲಾ ಯೋಜನೆಗಳ ಸವಲತ್ತನ್ನು ಸ್ತ್ರೀಯರ ಹೆಸರಿಗೆ ಕೊಡುವ ಚಿಂತನೆ – ಡಿ.ಕೆ.ಶಿವಕುಮಾರ 

ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಸೋಮವಾರ ನಾ ನಾಯಕಿ ಅಭಿಯಾನದ ಕಾರ್ಯಕ್ರಮವನ್ನು ವರ್ಚುವಲ್ ವಿಡಿಯೋದ ಮೂಲಕ ಉದ್ಘಾಟಿಸಿ ಮಾತನಾಡಿದ ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ,  ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರಕಾರದ ಎಲ್ಲಾ ಯೋಜನೆಗಳ ಸವಲತ್ತನ್ನು ಸ್ತ್ರೀಯರ ಹೆಸರಿಗೆ ಕೊಡುವ ಚಿಂತನೆ ನಮಗಿದೆ. ಜತಗೆ ಇದು ನನ್ನ ಕನಸಲ್ಲ, ಇಂದಿರಾ ಗಾಂಧಿ ಅವರ ಕನಸು. ಅವರು ಸ್ತ್ರೀ ಸಬಲೀಕರಣಕ್ಕೆ ದೊಡ್ಡ ಕೊಡುಗೆ ಕೊಟ್ಟ ಧೀಮಂತ ನಾಯಕಿ. ಅವರ ಕನಸನ್ನು ನೀವು ಇಂದು ನನಸು ಮಾಡಬೇಕಿದೆ ಎಂದು ಹೇಳಿದರು.

 

ರಾಜ್ಯದಲ್ಲಿ ನಾ ನಾಯಕಿ ಎಂಬ ಐತಿಹಾಸಿಕ ಕಾರ್ಯಕ್ರಮ ಪ್ರಾರಂಭವಾಗಿದೆ. ಹೆಣ್ಣು ಕುಟುಂಬದ ಕಣ್ಣು. ಅಷ್ಟೇ ಅಲ್ಲದೇ ಸಮಾಜಕ್ಕೂ ಕಣ್ಣು, ಮಹಿಳೆಯರು ಶಕ್ತಿ ತುಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎಲ್ಲಾ ಪಕ್ಷದಿಂದ ಮೀಸಲಾತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಕೊಡುಗೆ ನೀಡಲಾಗುತ್ತದೆ. ಎಲ್ಲಾ ಮಹಿಳೆಯರು ಸ್ವತಂತ್ರವಾಗಿ ಮಾತನಾಡಬೇಕು. ಅಂತಹ ಶಕ್ತಿಯನ್ನು ನಾ ನಾಯಕಿಯಾಗಿ ಕೆಲಸವನ್ನು ಮಾಡಬೇಕು. ಈಗಾಗಲೇ ಚುನಾವಣೆಯಲ್ಲಿ ಗೆದ್ದಿರುವಂತಹ ಮಹಿಳೆಯರು, ನಿಮ್ಮ ಅಧಿಕಾರದ ನಿರ್ವಹಣೆಯನ್ನು ನೀವೇ ನಿಭಾಯಿಸುವಷ್ಟು ಸಮರ್ಥರಾಗಬೇಕು ಎಂದರು.

ಖ್ಯಾತ ಚಲಚಿತ್ರ ನಟಿ ಜಯಮಾಲಾ ಮಾತನಾಡಿ, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಮಾದರಿಯಾದ ಕಾರ್ಯಕ್ರಮ ಅಂದರೆ ಅದು ನಾ ನಾಯಕಿ ಕಾರ್ಯಕ್ರಮವಾಗಿದೆ. ಹಣ್ಣಿಗೆ ಒಂದು ಹಣತೆ ಹೆಚ್ಚುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತದೆ. ಕಳೆದ ಎಂಟು ವರ್ಷಗಳಿಂದ ಸಾಕಷ್ಟು ಬದಲಾವಣೆ ಆಗಿದೆ. ಜಾತಿ ಜಾತಿಗಳ ಜಗಳ ನಡೆಯುತ್ತದೆ. ಜತಗೆ ಬಡತನ, ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಹತ್ತು ಹಲವಾರು ಸಮಸ್ಯೆ ಕಂಡು ಬರುತ್ತದೆ. ಕಾಂಗ್ರೆಸ್ ಪಕ್ಷ ಜನರ ಪರವಾಗಿ ಕೆಲಸವನ್ನು ಮಾಡುತ್ತದೆ. ನಾವು ಯಾರ ಮೇಲೆ ಆರೋಪ ಮಾಡುವುದಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆ ಕಾಣುತ್ತದೆ. ಕಾಂಗ್ರೆಸ್ ಪಕ್ಷ ಚುನಾವಣೆಗಾಗಿ ಪ್ರಣಾಳಿಕೆ ಮಾಡಿಲ್ಲ. ಬದಲಾಗಿ ಇಡೀ ನಮ್ಮ ಜೀವನದ ದೃಷ್ಟಿ ಕೋನ ಇಟ್ಟಿಕೊಂಡು ಪ್ರಣಾಳಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಣ್ಣು ಮಕ್ಕಳನ್ನು ಗುರುತಿಸುವ ಕೆಲಸವನ್ನು ಮಾಡಬೇಕು. ಮುಂದಿನ ದಿನಗಳಲ್ಲಿ ಉತ್ತಮ ನಾಯಕಿ ಆಗಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಕವಿತಾ ಕಾಶಪ್ಪನವರ ಮಾತನಾಡಿ, ಮಹಿಳೆ ಮತ್ತು ಶಿಕ್ಷಣ ಕುರಿತು ಮಾತನಾಡಿದರು. ಮಹಿಳೆಯರು ಸ್ವಾವಲಂಬನೆ ಜೀವನ ನಡೆಸಲು ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಆದರಿಂದ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದರು.

ಶಾಸಕಿ ಅಜಂಲಿ ಲಿಂಬಾಳಕರ್, ವೀಣಾ ಕಾಶಪ್ಪನವರ ಮಾತನಾಡಿದರು.

ಈ ಸಂದರ್ಭದಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಎಲ್ಲ ಮುಖಂಡರು, ಮಾಜಿ ಸಚಿವೆ  ಉಮಾಶ್ರೀ,    ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಪುಷ್ಪ ಅಮರನಾಥ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ACBಯಿಂದ IAS ಅಧಿಕಾರಿ ಜೆ.ಮಂಜುನಾಥ್ ಅರೆಸ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button