ಗಂಗಾರತಿ ನೋಡಲು ಕಾಶಿಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿ ಬಂದ್ರೆ ಸಾಕು -ಶಾಸಕಿ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಗಂಗಾರತಿ ನೋಡಲು ಕಾಶಿಗೆ ಹೋಗುವ ಅವಶ್ಯಕತೆ ಇಲ್ಲ, ಹುಕ್ಕೇರಿ ಹಿರೇಮಠದ ದಸರಾ ಉತ್ಸವಕ್ಕೆ ಬಂದರೆ ಗಂಗಾರತಿ ನೋಡುವ ಸೌಭಾಗ್ಯ ದೊರೆಯುತ್ತದೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಹೇಳಿದರು.
ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ನಡೆದ ವಿಶೇಷ ಗಂಗಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದುರ್ಗಾದೇವಿಗೆ ಹಾಗೂ ಶ್ರೀ ಗುರುಶಾಂತೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ನಾನು ಪ್ರತಿ ವರ್ಷ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಭಾಗವಹಿಸುತ್ತೆನೆ. ಇವತ್ತು ನವರಾತ್ರಿಯ ಒಂಬತ್ತನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧೇನೆ. ಗಂಗಾರತಿ ನೋಡಿ ಎರಡು ಕಣ್ಣುಗಳು ತುಂಬಿದವು ಎಂದರು.
ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಪಿಠಾಧಿಪತಿಗಳಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಹುಕ್ಕೇರಿ ಹಿರೇಮಠದಲ್ಲಿ ಪ್ರತಿವರ್ಷವೂ ದಸರಾ ಉತ್ಸವದಲ್ಲಿ ವಿಭಿನ್ನ ಕಾರ್ಯಕ್ರಮಗಳು ಜರುಗುತ್ತವೆ, ಇವತ್ತು ನವರಾತ್ರಿಯ ಕೊನೆಯ ದಿನ ಕಾರಂಜಿಗೆ ಗಂಗಾರತಿಯನ್ನು ಹುಕ್ಕೇರಿ ಹಿರೇಮಠದ ಸದ್ಭಕ್ತರು ಎಲ್ಲರೂ ಸೇರಿ ಮಾಡಿದ್ದಾರೆ, ಎಲ್ಲರಿಗೂ ಒಳಿತಾಗಲಿ ಎಂದು ಆಶಿರ್ವದಿಸಿದರು.
ಈ ಸಂದರ್ಭದಲ್ಲಿ ಶಶಿಕಲಾ ಜೊಲ್ಲೆ ಅವರು ಕಾರಂಜಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಗುರುಶಾಂತೇಶ್ವರರ ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿ ಅರ್ಪಿಸಿದರು.
ಗಂಗಾರತಿ ಕಾರ್ಯಕ್ರಮದಲ್ಲಿ ಪಿ ಜಿ ಹುಣಶ್ಯಾಳದ ನಿಜಗುಣ ದೇವರು,,ಗೋಕಾಕದ ಬ್ರಹ್ಮಾನಂದ ಸ್ವಾಮಿಗಳು, ವಿದ್ವಾನ್ ಸಂಪತ್ತಕುಮಾರ ಶಾಸ್ತ್ರೀಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ