Belagavi NewsBelgaum NewsElection NewsKannada NewsKarnataka NewsNationalPolitics

ಮೋದಿ ಕಾರ್ಯಕ್ರಮಕ್ಕೆ ಈ ವಸ್ತುಗಳು ತರುವಂತಿಲ್ಲ: ಬೆಳಗಾವಿ ಪೊಲೀಸ್ ಕಮೀಷನರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಧಾ‌ನಿ ನರೇಂದ್ರ ಮೋದಿ, ಅವರು ನಾಳೆ ಮಾಲಿನಿ ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಸದರಿ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಕಾರ್ಯಕ್ರಮ ಸ್ಥಳಕ್ಕೆ ಕೆಲವು ವಸ್ತುಗಳನ್ನು ತೆಗೆದುಕೊಂಡು ಬರುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ‌.

ಯಾವುದೇ ಮಾರಕಾಸ್ತ್ರ, ಕಪ್ಪು ಬಟ್ಟೆ, ಕಪ್ಪು ಧ್ವಜ, ಕರಪತ್ರ, ಬೆಂಕಿಕಾರಕ ವಸ್ತುಗಳು (Flamable), ವಿಷಕಾರಕ ಪದಾರ್ಥ ಹಾಗೂ ನೀರಿನ ಬಾಟಲಿ ಇತ್ಯಾದಿ ನಿಷೇಧಿತ ವಸ್ತುಗಳನ್ನು ತಮ್ಮೊಡನೆ ತೆಗೆದುಕೊಂಡು ಬರಬಾರದೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

Home add -Advt

ಅಂತಹ ನಿಷೇಧಿತ ವಸ್ತುಗಳು ಯಾವುದೇ ವ್ಯಕ್ತಿಯ ವಶದಲ್ಲಿ ಕಂಡು ಬಂದಲ್ಲಿ ಅಂಥವರನ್ನು ಕಾರ್ಯಕ್ರಮ ಸ್ಥಳದಲ್ಲಿ ಅನುಮತಿಸಲಾಗುವುದಿಲ್ಲ ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಕಟನೆ ಮೂಲಕ ತಿಳಿಸಿದ್ದಾರೆ.‌

Related Articles

Back to top button