Latest

ಲೋಕಸಭಾ ಚುನಾವಣೆ ಬಳಿಕ ಮತ್ತಷ್ಟು ದೋಸ್ತಿ ಶಾಸಕರ ರಾಜಿನಾಮೆ -ಈಶ್ವರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರಾಜಿನಾಮೆ ಅಂಗೀಕರಿಸುತ್ತಾರೋ ಇಲ್ಲವೋ ಎನ್ನುವ ಭಯದಿಂದಾಗಿ ಅತೃಪ್ತ ಶಾಸಕರು ರಾಜಿನಾಮೆ ನೀಡಿರಲಿಲ್ಲ. ಈಗ ಉಮೇಶ ಜಾಧವ ರಾಜಿನಾಮೆ ಅಂಗೀಕರಿಸಿರುವುದರಿಂದ ಶಾಸಕರಿಗೆ ಧೈರ್ಯ ಬಂದಿದೆ. ಲೋಕಸಭಾ ಚುನಾವಣೆ ಬಳಿಕ ಮತ್ತಷ್ಟು ಶಾಸಕರು ತಾವಾಗೇ ರಾಜಿನಾಮೆ ನೀಡುತ್ತಾರೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾವು ಕಾಂಗ್ರೆಸ್ ಅಥವಾ ಜೆಡಿಎಸ್ ನ ಯಾವುದೇ ಶಾಸಕರನ್ನು ಸಂಪರ್ಕಿಸಿಲ್ಲ. ಅವರಿಗೆ ಸರಕಾರದಲ್ಲಿ ಅತೃಪ್ತಿ ಇದೆ. ಅವರಾಗಿಯೇ ರಾಜಿನಾಮೆ ನೀಡುತ್ತಾರೆ. ಇದರಲ್ಲಿ ಬಿಜೆಪಿಯ ಕೈವಾಡದ ಪ್ರಶ್ನೆಯೇ ಇಲ್ಲ ಎಂದರು.

Home add -Advt

ಬಿಜೆಪಿಯನ್ನು ಕೋಮುವಾದಿ ಎನ್ನುತ್ತಾರೆ. ಆದರೆ ನಿಜವಾದ ಜಾತಿವಾದಿಗಳು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನವರು. ಅವರು ಸ್ವಾರ್ಥಕ್ಕಾಗಿ ಜಾತಿಯನ್ನು ಯಾವ ಮಟ್ಟದಲ್ಲಾದರೂ ಬಳಸಿಕೊಳ್ಳುತ್ತಾರೆ. ಕುರುಬರನ್ನು ಕೇವಲ ವೋಟ್  ಮಾಡಿಕೊಂಡಿದ್ದಾರೆ. ಮಂಡ್ಯದಲ್ಲೂ ಸುಮಲತಾ ವಿರುದ್ಧ ಜಾತಿಯ ಅಸ್ತ್ರ ಬಳಸಲು ಯತ್ನಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. 

ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜು ಚಿಕ್ಕನಗೌಡರ್ ಮೊದಲಾದವರು ಇದ್ದರು.

Related Articles

Back to top button