ಕಳ್ಳನನ್ನು ಪ್ಯಾಂಟಿನಿಂದ ಕಟ್ಟಿದ ವಿಡಿಯೋ ವೈರಲ್

ಉಕ್ರೇನ್‌ನಲ್ಲಿ ಜೋರಾದ ಲೂಟಿ ಪ್ರಕರಣಗಳು

 

 

 ಕೀವ್ –  ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಈಗ ಮನೆ, ಅಂಗಡಿಗಳ ಕಳ್ಳತನ ಪ್ರಕರಣಗಳು ಜೋರಾಗಿವೆ. ಈ ನಡುವೆ ಕಳುವು ಮಾಡುವಾಗಿ ಸಿಕ್ಕುಬಿದ್ದವನನ್ನು ಬೀದಿ ದೀಪದ ಕಂಬಕ್ಕೆ ಆತನದೆ ಪ್ಯಾಂಟಿನಿಂದ ಕಟ್ಟಿಹಾಕಿದ ವಿಡಿಯೋ ಒಂದು ವೈರಲ್ ಆಗಿದೆ.

ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ರಾಜಧಾನಿ ಕೀವ್ ಸೇರಿದಂತೆ ಬಹುತೇಕ ನಗರಗಳಲ್ಲಿ ಜನ ಮನೆ ಖಾಲಿ ಮಾಡಿ ಅನ್ಯ ದೇಶಗಳಿಗೆ ಪಲಾಯನಗಯ್ಯುತ್ತಿದ್ದಾರೆ. ಈ ವರೆಗೆ ೧೨.೫೦ ಲಕ್ಷಕ್ಕೂ ಹೆಚ್ಚು ಜನ ಉಕ್ರೇನ್‌ನಿಂದ ಅಕ್ಕ ಪಕ್ಕದ ದೇಶಗಳಿಗೆ ತೆರಳಿದ್ದಾರೆ. ಇದರಿಂದ ಕಳುವು ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಇನ್ನೊಂದೆಡೆ ನೀರು, ವಿದ್ಯುತ್, ಆಹಾರ ಪದಾರ್ಥಗಳ ಅಭಾವವೂ ಜನರನ್ನು ಕಳ್ಳತನಕ್ಕೆ ಪ್ರೇರೇಪಿಸುತ್ತಿದೆ.

ಹೀಗೆ ಮನೆಯೊಂದನ್ನು ಕಳುವು ಮಾಡಲು ಬಂದ ವ್ಯಕ್ತಿಯಬ್ಬನನ್ನು ಜನ ಹಿಡಿದು ಕಂಬಕ್ಕೆ ಆತನದೇ ಪ್ಯಾಂಟ್‌ನಿಂದ ಕಟ್ಟಿ ಹಾಕಿದ್ದಾರೆ. ಈತ ಉಕ್ರೇನ್‌ದವನೋ ಅಥವಾ ಬೇರೆ ದೇಶದವನೋ ತಿಳಿದುಬಂದಿಲ್ಲ.

ಕಂಬಕ್ಕೆ ಕಟ್ಟಿದ ದೃಷ್ಯವನ್ನು ವಿಡಿಯೋ ಮಾಡಲಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದೆ. ಜೊತೆಗೆ ನನ್ನ ಉಕ್ರೇನ್‌ನಲ್ಲಿ ಲೂಟಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಬರೆಯಲಾಗಿದೆ.

ದುಡ್ಡಿಲ್ಲದವರಿಗೆ ಉಚಿತ ಎಂದ ಮಾಲ್ ಮಾಲಿಕ

ಇನ್ನು ರಷ್ಯಾದ ಸೈನಿಕರು ಸಹ ಉಕ್ರೇನ್‌ನ ದಿನಸಿ ಅಂಗಡಿಗಳು, ಮಾಲ್‌ಗಳಲ್ಲಿ ಲೂಟಿ ಮಾಡತೊಡಗಿದ್ದಾರೆ. ಉಕ್ರೇನ್‌ನ ಮಾಲ್ ಒಂದರಲ್ಲಿ ದುಡ್ಡಿಲ್ಲದವರು ಇಲ್ಲಿನ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳಿ ಎಂಬ ಬೋರ್ಡ್ ಸಹ ಬರೆಯಲಾಗಿದೆ.

ಕಾರವಾರದ ಅಪ್ರಾಪ್ತೆಗೆ ಬ್ಲ್ಯಾಕ್ ಮೇಲ್: ಯಲ್ಲಾಪುರದ ಖಾಸಗಿ ಕಂಪನಿ ಉದ್ಯೋಗಿ ವಿರುದ್ಧ ಕ್ರಮ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button